Log In
BREAKING NEWS >
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಮೇ ೧೦ರ೦ದು ಶ್ರೀಗೋಕರ್ಣಮಠಾಧೀಶರು ತಮ್ಮ ಶಿಷ್ಯರೊ೦ದಿಗೆ ಆಗಮಿಸಲಿದ್ದು ೫ದಿನಗಳ ಕಾಲ ಮೊಕ್ಕ೦ ಹೂಡಲಿದ್ದಾರೆ....

ಸುಳ್ಯ ಶಾಲಾ ವಾಹನಕ್ಕೆ ಬೆಂಕಿ, ತಪ್ಪಿದ ಭಾರಿ ಅನಾಹುತ

ಸುಳ್ಯ : ಕೆವಿಜಿ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್ಸೊಂದು ತಾಂತ್ರಿಕ ದೋಷದಿಂದ ಹೊತ್ತಿ ಉರಿದ ಘಟನೆ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ಗುರುವಾರ ಮುಂಜಾನೆ ಸಂಭವಿಸಿದೆ.

ಕೆವಿಜಿ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್ಸು ಇಂದು ಮುಂಜಾನೆ ಶಾಲಾ ಮಕ್ಕಳನ್ನು ಕರೆತರಲು ತೆರಳುತ್ತಿದ್ದ ಸಂದರ್ಭ ಇದ್ದಕಿದ್ದಂತೆ ಹೊತ್ತಿ ಉರಿದಿದೆ, ಘಟನೆ ನಡೆದ ಸಂದರ್ಭ ಬಸ್ಸಿನಲ್ಲಿ ಮಕ್ಕಳು ಇರದ ಕಾರಣ ಯಾವುದೇ ದುರಂತ ಸಂಭವಿಸಲಿಲ್ಲ,

ಬಸ್ಸಿಗೆ ಬೆಂಕಿ ಹೊತ್ತಿದ ಸಂದರ್ಭ ಬಸ್ ಚಾಲಕ ಸೇರಿ ಇಬ್ಬರು ಬಸ್ಸಿನಿಂದ ಜಿಗಿದಿದ್ದಾರೆ ಇದರಿಂದ ಬಸ್ಸು ಸಂಪೂರ್ಣ ಸುಟ್ಟು ಕರಕಲಾಗಿದೆ.

ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment