Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಛತ್ತೀಸ್‏ಗಢ: ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ದಾಳಿಗೆ 9 ಸಿಆರ್‏ಪಿಎಫ್ ಸಿಬ್ಬಂದಿ ಹುತಾತ್ಮ/CRPF’s mine-protected vehicle blown up by multiple IEDs

ನವದೆಹಲಿ: ಛತ್ತೀಸ್‏ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ದಾಳಿಯಲ್ಲಿ ಒಂಭತ್ತು ಸಿಆರ್‏ಪಿಎಫ್  ಯೋಧರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಘಟನೆಯಲ್ಲಿ ಕೆಲವು ಯೋಧರು ಗಾಯಗೊಂಡಿದ್ದಾರೆಂದು ವರದಿಯಾಗಿದ್ದು ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ಆರು ತಿಂಗಳ ಹಿಂದೆ ಮಾವೋವಾದಿ ನಕ್ಸಲರುನಡೆಸಿದ್ದ ಮಾರಣಾಂತಿಕ ದಾಳಿಯಲ್ಲಿ 25 ಸಿಆರ್‏ಪಿಎಫ್  ಜವಾನರು ಸಾವನ್ನಪ್ಪಿದ್ದರು. ಇದೀಗ ಮತ್ತೆ ಅದೇ ರೀತಿಯ ದಾಳಿ ನಡೆದಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಸುಕ್ಮಾ ಜಿಲ್ಲೆಯ ನಕ್ಸಲ್ ಪ್ರಾಬಲ್ಯದ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ಕಾಮಗಾರಿ ಸುರಕ್ಷ್ತಾ ದೃಷ್ಟಿಯಿಂದ ಯೋಧರನ್ನು ನೇಮಕ ಮಾಡಲಾಗಿತ್ತು. ಆಗ 300-400 ಎಡಪಂಥೀಯ ದಂಗೆಕೋರರು ದಾಳಿ ನಡೆಸಿದ್ದು ಸಿಆರ್‏ಪಿಎಫ್  ಯೋಧರನ್ನು ಕೊಂದು ಹಾಕಿದ್ದರು.

ಇದೇ ಅಲ್ಲದೆ ಕಳೆದ ಮಾರ್ಚ್ ನಲ್ಲಿ ಸಹ ಸುಕ್ಮಾ ಜಿಲ್ಲೆಯಲ್ಲಿ 12 ಸಿಆರ್‏ಪಿಎಫ್  ಯೋಧರು ನಕ್ಸಲ್ ದಾಳಿಗೆ ತುತ್ತಾಗಿದ್ದರು.

ಇಷ್ಟಾಗಿಯೂ ನಕ್ಸಲ್ ಹಾಗೂ ಯೋಧರ ನಡುವಿನ ಸಂಘರ್ಷಗಳಲ್ಲಿ ಯೋಧರು ಸಾಕಷ್ಟು ಯಶ ಕಂಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಛತ್ತೀಸ್‏ಗಢದಲ್ಲಿ ನಡೆದ ಪ್ರತ್ಯೇಕ ಎನ್ ಕೌಂಟರ್ ಪ್ರಕರಣಗಳಲ್ಲಿ 300 ಕ್ಕೂ ಅಧಿಕ ನಕ್ಸಲರನ್ನು ಕೊಲ್ಲಲಾಗಿದೆ ಎಂದು ಮಧ್ಯ ಪ್ರದೇಶ ಗೃಹ ಸಚಿವ ರಾಮ್ ಸೇವಕ್ ಪೈಕ್ರಾ ಇತ್ತೀಚೆಗಷ್ಟೆ ವಿಧಾನಸಭೆಯಲ್ಲಿ ತಿ:ಳಿಸಿದ್ದರು.

ಮಾವೋವಾದಿಗಳ ಹಿಡಿತದಲ್ಲಿರುವ ಛತ್ತೀಸ್‏ಗಢದ ಅಬುಜ್ಮಾದ್ ಅರಣ್ಯ ಪ್ರದೇಶದಲ್ಲಿ ಸಿಆರ್‏ಪಿಎಫ್  ಪಡೆ ಮೂರು ಶಾಶ್ವತ ಶಿಬಿರಗಳನ್ನು ಈ ತಿಂಗಳ  ಪ್ರಾರಂಭದಲ್ಲಿ\ ಸ್ಥಾಪಿಸಲಾಗಿತ್ತು. ಹೀಗೆ ಸ್ಥಾಪಿತವಾದ ಪ್ರತಿ ಕ್ಯಾಂಪ್ ಗಳಲ್ಲಿ ಕನಿಷ್ಟ ನೂರು ಸಿಬ್ಬಂದಿಗಳಿರುತ್ತಿದ್ದರು.

ನಕ್ಸಲ್ ಕಾರ್ಯಾಚರಣೆ ತಡೆಗಟ್ಟುವ ಸಲುವಾಗಿ ಸಿಆರ್‏ಪಿಎಫ್  ಹಾಗೂ ಇತರೆ ಭದ್ರತಾ ಪಡೆಗಳು ನಡೆಸುವ ’ಆಪರೇಷನ್ ಮಾಧ್’ ನ ಭಾಗವಾಗಿ ಈ ಶಿಬಿರಗಳನ್ನು ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Nine CRPF personnel were today killed after suspected Naxals blew up their mine-protected vehicle in Chhattisgarh’s Sukma, around a year after a dozen jawans were killed in a similar ambush in the district. Officials said the incident took place around 12:30 pm along the Kistaram-Palodi road of the district when the troops of the 212th battalion of the Central Reserve Police Force were out on an operation.

At least nine men have been killed, while two other jawans suffered injuries after the mine-protected vehicle was blown up by multiple improvised explosive devices (IEDs) concealed under the dirt track, a senior official said. The injured personnel are being airlifted to Raipur, they said.

The rebels used a lot of explosives to blow up the vehicle, a state police official said. Soon after the incident, reinforcements were rushed to the spot, around 500 km from state capital Raipur, he said, adding further details were awaited.

Officials added that the first encounter between the two sides took place at 8 am and later this contingent was targeted by the Maoists. Twelve personnel of the force were killed on March 11 last year in the Bheji area of the district and their arms looted, when Naxals ambushed their patrol party.

A few days later on April 24, twenty-five personnel of the paramilitary were killed in a similar ambush in Sukma. — PTI

No Comments

Leave A Comment