Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಟಿ20 ಕ್ರಿಕೆಟ್‍ನಲ್ಲಿ ಹಿಟ್ ವಿಕೆಟ್ ಆದ ಮೊದಲ ಭಾರತೀಯ ಕೆಎಲ್ ರಾಹುಲ್!

ಕೊಲೊಂಬೋ: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಹಿಟ್ ವಿಕೆಟ್ ಆದ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಕನ್ನಡಿಗ ಕೆಎಲ್ ರಾಹುಲ್ ಪಾತ್ರರಾಗಿದ್ದಾರೆ.

ನಿಡಹಾಸ್ ತ್ರಿಕೋನ ಟಿ20 ಸರಣಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಜೀವನ್ ಮೆಂಡಿಸ್ ಬೌಲಿಂಗ್ ನಲ್ಲಿ 18 ರನ್ ಗಳಿಸಿದ್ದ ಕೆಎಲ್ ರಾಹುಲ್ ಹಿಟ್ ವಿಕೆಟ್ ಆಗಿ ಔಟಾದರು. ಆ ಮೂಲಕ ಟಿ20 ಕ್ರಿಕೆಟ್ ನಲ್ಲಿ ಹಿಟ್ ವಿಕೆಟ್ ಆದ ಮೊದಲ ಭಾರತೀಯ ಆಟಗಾರನೆಂಬ ದಾಖಲೆ ಬರೆದುಕೊಂಡರು.

ಇನ್ನು ಜಾಗತಿಕ ಕ್ರಿಕೆಟ್ ನಲ್ಲಿ ಈ ರೀತಿ ಔಟಾಗಿರುವುದು ಕೇವಲ 9 ಆಟಗಾರರು ಮಾತ್ರ. ಈ ಸಾಲಿಗೆ ಇದೀಗ ಕೆಎಲ್ ರಾಹುಲ್ ಸಹ ಸೇರ್ಪಡೆಗೊಂಡಿದ್ದಾರೆ.

No Comments

Leave A Comment