Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಪಶ್ಮಿಮ ಬಂಗಾಳ: ಕನ್ಯಾದಾನವಿಲ್ಲದೆ ಮದುವೆ ಮಾಡಿಸುವ ಮೊದಲ ಮಹಿಳಾ ಪುರೋಹಿತೆ ನಂದಿನಿ

ಕೋಲ್ಕತ್ತಾ:ಪಶ್ಚಿಮ ಬಂಗಾಳ ಮೂಲದ ನಂದಿನಿ ಭೌಮಿಕ್ ತಾಯಿಯಾಗಿ, ಪ್ರಾಧ್ಯಾಪಕಿಯಾಗಿ, ಕಲಾವಿದೆಯಾಗಿ ಹಲವು ಗರಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಆದರೆ ಅದೆಲ್ಲಕ್ಕಿಂತಲೂ ಮುಖ್ಯವಾಗಿರುವುದು ಅವರು ಅರ್ಚಕಿಯಾಗಿರುವುದು. ಹೌದು ಪುರುಷ ಪ್ರಧಾನವಾದ ಈ ಸಮಾಜದಲ್ಲಿ ನಂದಿನಿಯವರು ಪಶ್ಚಿಮ ಬಂಗಾಳದಲ್ಲಿ ಮೊದಲ ಮಹಿಳಾ ಹಿಂದೂ ಅರ್ಚಕಿಯಾಗಿದ್ದಾರೆ.

ಪಶ್ಚಿಮ ಬಂಗಾಳದ ಜದವ್ ಪುರ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕಿಯಾಗಿರುವ ನಂದಿನಿ ಭೌಮಿಕ್ ಕಳೆದ 10 ವರ್ಷಗಳಲ್ಲಿ ಸುಮಾರು 40 ಮದುವೆ ಮಾಡಿಸಿದ್ದಾರೆ. ಸಂಸ್ಕೃತ ಶ್ಲೋಕಗಳನ್ನು ಸರಳವಾಗಿ ಇಂಗ್ಲಿಷ್ ಮತ್ತು ಬಂಗಾಳಿ ಭಾಷೆಗಳಿಗೆ ತರ್ಜುಮೆ ಮಾಡಿ ಮದುಮಕ್ಕಳ ಬಾಯಲ್ಲಿ ಹೇಳಿಸುತ್ತಾರೆ. ನಂದಿನಿಯವರ ತಂಡ ಹಿಂದಿನಿಂದ ರವೀಂದ್ರ ಸಂಗೀತ ನುಡಿಸುತ್ತಿರುತ್ತದೆ.

ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆ ಕೂಡ ನಂದಿನಿ ಹಲವು ಅಂತರ್ ಧರ್ಮೀಯ, ಅಂತರ್ಜಾತಿ ಮತ್ತು ಅಂತರ್ ಜನಾಂಗ ಮದುವೆಗಳನ್ನು ಕೋಲ್ಕತ್ತಾ ಮತ್ತು ಇತರ ಕಡೆಗಳಲ್ಲಿ ಮಾಡಿಸಿದ್ದಾರೆ.ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಅವರು, ತಾವು ಸುಧಾರಕಿ ಎಂದು ಭಾವಿಸುತ್ತೇನೆ. ಕನ್ಯಾದಾನವೆಂದರೆ ವಸ್ತುವಾಗಿ ನೋಡಿದಂತಾಗುತ್ತದೆ ಎಂಬ ಭಾವನೆ ನನ್ನದು, ಹೀಗಾಗಿ ನನ್ನ ಮದುವೆ ಶಾಸ್ತ್ರಗಳಲ್ಲಿ ಕನ್ಯಾದಾನ ಸಂಸ್ಕಾರವಿರುವುದಿಲ್ಲ. ಸಂಪ್ರದಾಯವನ್ನು ಸರಳವಾಗಿ, ಚಿಕ್ಕದಾಗಿ ನೆರವೇರಿಸುತ್ತೇನೆ. ಒಂದು ಗಂಟೆಯಲ್ಲಿ ಮದುವೆ ಕಾರ್ಯಕ್ರಮ ಸಂಪೂರ್ಣವಾಗಿ ಮುಗಿದುಹೋಗುತ್ತದೆ ಎಂದು ಅವರು ಹೇಳುತ್ತಾರೆ.

ರಾಜಕೀಯ ಹಿಂದುತ್ವ ಬೆಳೆಯುತ್ತಿದ್ದರೂ ಕೂಡ ಧಕ್ಕೆಯುಂಟಾಗಿದೆ ಎನ್ನುತ್ತಾರೆ ಭೌಮಿಕ. ಸಾಂಪ್ರದಾಯಿಕ ಪುರೋಹಿತರೆಂದರೆ ನನಗೆ ಗೌರವವಿದೆ, ಅವರ ಜೊತೆ ನಾನು ಸಂಘರ್ಷಕ್ಕಿಳಿಯುವುದಿಲ್ಲ. ಆಕ್ರಮಣಕಾರಿ ಹಿಂದುತ್ವ ಬೆಳೆಯುತ್ತಿರುವುದು ಸಮಾಜಕ್ಕೆ ಧಕ್ಕೆ ಎಂದು ನನ್ನ ಪತಿ ಭಾವಿಸುತ್ತಿದ್ದರೂ ಕೂಡ ನನಗೆ ಇದುವರೆಗೆ ಯಾವುದೇ ವೈಯಕ್ತಿಕ ಬೆದರಿಕೆಗಳು ಬಂದಿಲ್ಲ ಎನ್ನುತ್ತಾರೆ ಭೌಮಿಕ. ಇಬ್ಬರು ಹೆಣ್ಣು ಮಕ್ಕಳ ತಾಯಿ ಭೌಮಿಕ.ನಂದಿನಿ ಭೌಮಿಕ ತಮ್ಮ ಹೆಣ್ಣು ಮಕ್ಕಳ ಮದುವೆ ಮಾಡಿ ಮುಗಿಸಿದ್ದಾರೆ. ಇವರಿಗೆ ತಮ್ಮ ಗುರು ಗೌರಿ ಧರ್ಮಪಾಲ್ ಅವರು ಪ್ರೇರಣೆಯಂತೆ. ಅರ್ಚಕಿಯಾಗಿ ತಮಗೆ ಬರುವ ಆದಾಯವನ್ನು ಭೌಮಿಕ ಒಡಿಶಾದ ಪುರಿ ಹತ್ತಿರವಿರುವ ಬಲಿಘೌಯಿ ಅನಾಥಾಶ್ರಮಕ್ಕೆ ದಾನ ಮಾಡುತ್ತಾರೆ.

No Comments

Leave A Comment