Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಕೋಲ್ಕತ್ತಾ: ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವ ಕಿರುತೆರೆ ನಟಿ ಮೃತದೇಹ ಪತ್ತೆ

ಕೋಲ್ಕತ್ತಾ: ನಗರದ ರೀಜೆಂಟ್ ಪಾರ್ಕ್ ಪ್ರದೇಶದ ಫ್ಲಾಟ್ ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವ ಕಿರುತೆರೆ ನಟಿ 23 ವರ್ಷದ ಮೌಮಿತಾ ಸಹಾ ಮೃತದೇಹ ಪತ್ತೆಯಾಗಿದೆ.

ನಟಿ ವಾಸವಿದ್ದ ಫ್ಲಾಟ್ ಬಾಗಿಲು ನಿನ್ನೆ ಮಧ್ನಾಹ್ನದಿಂದ ಮುಚ್ಚಿದ್ದರಿಂದ ಮನೆಯ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದರು. ಅಲ್ಲಿಗೆ ಬಂದ ಪೊಲೀಸರು ಮನೆಯ ಬಾಗಿಲನ್ನು ಹೊಡೆದು ನೋಡಿದಾಗ ರೂಂನ ಸಿಲಿಂಗ್ ಫ್ಯಾನ್ ನಲ್ಲಿ ನಟಿಯ ಮೃತದೇಹ ನೋತಾಡುತ್ತಿತ್ತು.

ಈ ಫ್ಲಾಟ್ ನಲ್ಲಿ ಕೆಲ ತಿಂಗಳುಗಳಿಂದ ನಟಿ ಒಬ್ಬಂಟಿಯಾಗಿ ವಾಸವಾಗಿದ್ದರು. ಸದ್ಯ ಮೃತದೇಹವನ್ನು ವಶಪಡಿಸಿಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕೋಣೆಯಲ್ಲಿ ಆತ್ಮಹತ್ಯಾ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಖಿನ್ನತೆಗೊಳಗಾಗಿ ಮೌಮಿತಾ ಸಹಾ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು ಆಕೆಯ ಫೋನ್ ಕಾಲ್ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

No Comments

Leave A Comment