Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಮ್ಯಾಕ್ರನ್‌ಗೆ ಭವ್ಯ ಸ್ವಾಗತ:14 ಒಪ್ಪಂದಕ್ಕೆ ಭಾರತ-ಫ್ರಾನ್ಸ್‌ ಸಹಿ

ಹೊಸದಿಲ್ಲಿ : ನಿನ್ನೆ ಶುಕ್ರವಾರ ರಾತ್ರಿಯಿಂದ ಆರಂಭಗೊಂಡಿರುವ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವಲ್‌ ಮ್ಯಾಕ್ರನ್‌ ಅವರ ನಾಲ್ಕು ದಿನಗಳ ಭಾರತ ಭೇಟಿಯ ಪಾರ್ಶ್ವದಲ್ಲಿ ಉಭಯ ದೇಶಗಳು 14 ಪ್ರಮುಖ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿವೆ.

ಉಭಯ ದೇಶಗಳ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಗೆ ಅತ್ಯಧಿಕ ಮಹತ್ವ ನೀಡಬೇಕಾದ ಅಗತ್ಯವನ್ನು ಒತ್ತಿ ಹೇಳಿದ ಮ್ಯಾಕ್ರನ್‌ ಅವರು, ವಿಶ್ವದ ಎರಡು ಮಹೋನ್ನತ ಪ್ರಜಾಸತ್ತೆಗಳು ಇನ್ನಷ್ಟು ನಿಕಟವಾಗಿ ಪರಿಶ್ರಮಿಸಬೇಕಾದ ಅಗತ್ಯವಿದೆ ಎಂದೇ ಹೇಳಿದರು.

ಭಾರತ ಮತ್ತು ಫ್ರಾನ್ಸ್‌ ಪೌರ ಪರಮಾಣು ಸಹಕಾರ, ಬಾಹ್ಯಾಕಾಶ ಸರಕಾರ, ಭಾರತೀಯ ರೈಲ್ವೆಗೆ ವಿದ್ಯುತ್‌ ಚಾಲಿತ ತಂತ್ರಜ್ಞಾನದ ವರ್ಗಾವಣೆ ಮುಂತಾಗಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಟ್ಟು 14 ಒಪ್ಪಂದಗಳಿಗೆ ಸಹಿ ಹಾಕಿದವು.

40ರ ಹರೆಯದ ಮ್ಯಾಕ್ರನ್‌ ಅವರು ಉಭಯ ದೇಶಗಳ ನಡುವಿನ ಬಾಂಧವ್ಯ ವೃದ್ಧಿಯಲ್ಲಿ ಇದೊಂದು ಹೊಸ ಯುಗದ ಆರಂಭ ಎಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಜಂಟಿ ಹೇಳಿಕೆಯಲ್ಲಿ , ವರ್ಣಿಸಿದರು.

ಶುಕ್ರವಾರ ತಡರಾತ್ರಿ ಪತ್ನಿ ಬಿಗ್ರಿಟ್‌ ಹಾಗೂ ಉನ್ನತ ಉದ್ಯಮಿಗಳು ಮತ್ತು ಅಧಿಕಾರಿಗಳ ತಂಡದೊಂದಿಗೆ ಆಗಮಿಸಿದ ಅಧ್ಯಕ್ಷ ಮ್ಯಾಕ್ರನ್‌ ಅವರನ್ನು ಪ್ರಧಾನಿ ಮೋದಿ ವಿಮಾನ ನಿಲ್ದಾಣದಲ್ಲಿ  ಸ್ವಾಗತಿಸಿದರು. ಇಬ್ಬರೂ ಪರಸ್ಪರ ಆತ್ಮೀಯ ಅಪ್ಪುಗೆಯನ್ನು ಹಂಚಿಕೊಂಡರು.

No Comments

Leave A Comment