Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಶಿರೂರು ಶ್ರೀ ರಾಜಕೀಯಕ್ಕೆ!;ಉಡುಪಿ BJP ಟಿಕೆಟ್‌ ಆಕಾಂಕ್ಷಿ-ಟಿಕೆಟ್‌ ಸಿಗದಿದ್ದರೆ ಪಕ್ಷೇತರನಾಗಿ ಕಣಕ್ಕೆ

ಉಡುಪಿ : ಯೋಗಿ ಆದಿತ್ಯನಾಥ್‌ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಗುತ್ತಿದ್ದಂತೆ ದೇಶಾದ್ಯಂತ ಹಲವು ಖಾವಿ ಧಾರಿ ಸ್ವಾಮೀಜಿಗಳಲ್ಲಿ ರಾಜಕಾರಣ ಪ್ರವೇಶಕ್ಕೆ ಆಸೆ ಮೂಡಿದೆ. ಇದಕ್ಕೆ ಹೊಸ ಸೇರ್ಪಡೆಯಾಗಿ ಉಡುಪಿಯ ಮಾಧ್ವ ಪರಂಪರೆಯ ಅಷ್ಠ ಮಠಗಳಲ್ಲೊಂದಾದ ಶಿರೂರು ಮಠದ ಶ್ರೀಗಳಾದ ಲಕ್ಷ್ಮೀವರ ತೀರ್ಥ ಶ್ರೀಪಾದರು ಬಿಜೆಪಿ ಟಿಕೆಟ್‌ ಆಕಾಂಕ್ಷಿ ನಾನು ಎಂದಿದ್ದಾರೆ.

ಹಿರಿಯಡಕದ ಶಿರೂರಿನಲ್ಲಿರುವ ಮೂಲ ಮಠದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು ‘ನಾನು ಅವಕಾಶ ಸಿಕ್ಕರೆ ಟಿಕೆಟ್‌ ನೀಡಿದರೆ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ದನಿದ್ದೇನೆ. ಟಿಕೆಟ್‌ ಸಿಗದಿದ್ದರೆ ಪಕ್ಷೇತರನಾಗಿ ಕಣಕ್ಕಿಳಿಯುವುದು ಖಚಿತ’ಎಂದರು.

‘ಯೋಗಿ ಆದಿತ್ಯನಾಥ್‌ ಅವರು ನನ್ನ ರೋಲ್‌ ಮಾಡೆಲ್‌’ ಎಂದ ಶ್ರೀಗಳು ‘ಮಠಾಧೀಶರು ರಾಜಕಾರಣಕ್ಕೆ ಬರಬಾರದೆಂದೇನಿಲ್ಲ’ ಎಂದರು.

ಜನಪ್ರತಿನಿಧಿಗಳು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಹೀಗಾಗಿ ನಾನು ರಾಜಕಾರಣಕ್ಕೆ ಬರಲು ಮನಸ್ಸು ಮಾಡಿದ್ದೇನೆ’ ಎಂದರು.

No Comments

Leave A Comment