Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಶಕೀಲಾ’ ಚಿತ್ರಕ್ಕೆ ರಿಚಾ ಚಡ್ಡಾ ನಾಯಕಿ

ಮುಂಬೈ: ತಮಿಳು, ತೆಲುಗು, ಕನ್ನಡ, ಮಲಯಾಳಂ ಸೇರಿ ದಕ್ಷಿಣ ಭಾರತದ ಭಾಷೆಗಳ ವಯಸ್ಕರ ಚಿತ್ರಗಳಲ್ಲಿ ಮಿಂಚಿದ್ದ ಕೇರಳದ ನಟಿ ಶಕೀಲಾ ಅವರ ಜೀವನ ಕಥೆಯಾಧಾರಿತ ಚಿತ್ರದಲ್ಲಿ ರಿಚಾ ಚಡ್ಡಾ ಅಭಿನಯಿಸುತ್ತಿದ್ದಾರೆ.

ಶಕೀಲಾ ತನ್ನ ಹದಿನಾರನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಂದಿನಿಂದ ಅವರ ಜೀವನ ಕಥೆಯ ಪ್ರಮುಖ ಘಟ್ಟಗಳನ್ನು ಚಿತ್ರದಲ್ಲಿ ನಿರೂಪಿಸಲಾಗುತ್ತದೆ. ತೊಂಭತ್ತರ ದಶಕದಲ್ಲಿ ಪುರುಷ ಪ್ರಧಾನವಾಗಿದ್ದ ಚಿತ್ರೋದ್ಯಮದಲ್ಲಿ ಶಕೀಲಾ ಸಾಕಷ್ಟು ಪ್ರಖ್ಯಾತಿ ಗಳಿಸಿಕೊಂಡಿದ್ದರು.

“ತೊಂಭತ್ತರಲ್ಲಿ ಕೇರಳದ ನಟಿ ಶಕೀಲಾ ಅತ್ಯಂತ ಜನಪ್ರಿಯತೆ ಗಳಿಸಿದ್ದರು. ಇವರ ಪ್ರಖ್ಯಾತಿ ಎಷ್ಟರ ಮಟ್ಟಿಗಿತ್ತು ಎಂದರೆ ಏಷ್ಯಾದಾದ್ಯಂತ ಈಕೆಗೆ ಅಭಿಮಾನಿಗಳಿದ್ದರು. ಇಂತಹಾ ನಟಿಯೊಬ್ಬರ ಜೀವನವನ್ನು ತೆರೆಯ ಮೇಲೆ ತರುತ್ತಿದ್ದು ಇದರಲ್ಲಿ ರಿಚಾ ಅಭಿನಯಿಸುತ್ತಿದ್ದಾರೆ” ರಿಚಾ ಅವರ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಕಥಾವಸ್ತು ಅತ್ಯಂತ ಉತ್ತೇಜನಾಕಾರಿಯಾಗಿದ್ದು ಪ್ರೇಕ್ಷಕರಿಗೆ ಉತ್ತಮ ಚಿತ್ರವೊಂದನ್ನು ವೀಕ್ಷಿಸಿದ ಅನುಭವವಾಗಲಿದೆ. ಚಿತ್ರೀಕರಣದ ಪೂರ್ವತಯಾರಿಗಳು ಶಿಘ್ರವಾಗಿ ಪ್ರಾರಂಭವಾಗಲಿದ್ದು ಏಪ್ರಿಲ್ ನ ಅಂತ್ಯ ಅಥವಾ ಮೇ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ” ವಕ್ತಾರರು ಹೇಳಿದ್ದಾರೆ.

ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಏಪ್ರಿಲ್ ನಲ್ಲಿ ಸೆಟ್ಟೇರಲಿದ್ದು ಮುಂದಿನ ವರ್ಷ ಪ್ರಾರಂಭದಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ.

No Comments

Leave A Comment