Log In
BREAKING NEWS >
ಶರತ್ ಮಡಿವಾಳ ಹತ್ಯೆ: ಆರೋಪಿ ಮಹಮದ್ ಷರೀಫ್ ಗೆ ಹೈಕೋರ್ಟ್ ಜಾಮೀನು....

ಮಾರ್ಚ್‌ 21 ರ ವರೆಗೆ ನಲಪಾಡ್‌ ನ್ಯಾಯಾಂಗ ಬಂಧನ ವಿಸ್ತರಣೆ

ಬೆಂಗಳೂರು: ವಿದ್ವತ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಕಾಂಗ್ರೆಸ್‌ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಮಹಮದ್‌ ನಲಪಾಡ್‌ ಹ್ಯಾರಿಸ್‌ಗೆ ಜೈಲು ವಾಸದಿಂದ ಮುಕ್ತಿ ಹೊಂದಲು ಇನ್ನೂ ಸಾಧ್ಯವಾಗಿಲ್ಲ. ಬುಧವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ 1 ನೇ ಎಸಿಎಂಎಂ ಕೋರ್ಟ್‌ ಮಾರ್ಚ್‌ 21 ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶ ನೀಡಿದೆ. ಇದರಿಂದಾಗಿ ಇನ್ನೂ 14 ದಿನ ನಲಪಾಡ್‌ಗೆ ಜೈಲೇ ಗತಿ ಆಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಲಪಾಡ್‌ ವಿಡಿಯೋ ಕಾನ್ಪರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದ. ನಲಪಾಡ್‌ನೊಂದಿಗೆ 8 ಮಂದಿ ಆರೋಪಿಗಳಿಗೂ ನ್ಯಾಯಾಂಗ ಬಂಧನ ವಿಸ್ತರಿಸಲಾಗಿರುವ ಬಗ್ಗೆ ವರದಿಯಾಗಿದೆ.

ವಕೀಲರಿಗೆ ಜಡ್ಜ್ ತಪರಾಕಿ!
ಇನ್ನೊಂದೆಡೆ ನಲಪಾಡ್‌ ಪರ ವಕೀಲರು ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ತುರ್ತು  ವಿಚಾರಣೆ ನಡೆಸಲು  ಕೋರಿ ಮನವಿ ಸಲ್ಲಿಸಿ ಮುಖಭಂಗಕ್ಕೀಡಾಗಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಏಕ ಸದಸ್ಯಪೀಠದ  ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರು ಸರದಿ ಪ್ರಕಾರ ಅರ್ಜಿ ವಿಚಾರಣೆ ನಡೆಸುತ್ತೇವೆ ಅಲ್ಲಿಯ ವರೆಗೆ ಕಾಯಿರಿ ಎಂದು ಸೂಚನೆ ನೀಡಿದ್ದಾರೆ.

ನಲಪಾಡ್‌ ಪರ ವಕೀಲರು ಮೊದಲ ಸುತ್ತಿನ ವಿಚಾರಣೆ ಬಳಿಕ ತುರ್ತು ವಿಚಾರಣೆ ನಡೆಸಲು ಮನವಿ ಸಲ್ಲಿಸಿದ್ದರು.

No Comments

Leave A Comment