Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ ಗೋವಾ ಸಿಎಂ ಮನೋಹರ್ ಪರಿಕ್ಕರ್

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಅವರ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳವಾರ ರಾತ್ರಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಮುಂಬೈನ ಲೀಲಾವತಿ ಆಸ್ಪತ್ರೆಯ ವೈದ್ಯರ ಸಲಹೆಯಂತೆ ಮುಖ್ಯಮಂತ್ರಿಗಳು ಹೆಚ್ಚಿನ ಚಿಕಿತ್ಸೆಗಾಗಿ ಇಂದು ರಾತ್ರಿ ಅಮೆರಿಕಕಕ್ಕೆ ತೆರಳಲಿದ್ದಾರೆ ಎಂದು ಮನೋಹರ್ ಪರಿಕ್ಕರ್ ಆಪ್ತ ಕಾರ್ಯದರ್ಶಿ ರುಪೇಶ್ ಕಾಮತ್ ಅವರು ತಿಳಿಸಿದ್ದಾರೆ.

ಪ್ಯಾಂಕ್ರಿಯಾಟಿಕ್‌ ತೊಂದರೆಯಿಂದ ಬಳಲುತ್ತಿದ್ದ ಮನೋಹರ್‌ ಪರಿಕ್ಕರ್‌ ಅವರು ನಿನ್ನೆಯಷ್ಟೇ ತಾವು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಬಹುದು ಎಂದು ಹೇಳಿದ್ದರು.

ಕಳೆದ ಫೆಬ್ರವರಿ 15ರಂದು ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ಪರಿಕ್ಕರ್ ಅವರು ಫೆಬ್ರವರಿ 22ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ, ನೇರವಾಗಿ ಗೋವಾ ವಿಧಾನಸಭೆಗೆ ಬಂದು ಬಜೆಟ್‌ ಮಂಡನೆಯನ್ನೂ ಮಾಡಿದ್ದರು. ನಂತರ ಮತ್ತೆ ಅನಾರೋಗ್ಯಕ್ಕೀಡಾದ ಮನೋಹರ್‌ ಪರಿಕ್ಕರ್‌ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಮಾರ್ಚ್‌ 1ರಂದು ಬಿಡುಗಡೆ ಮಾಡಲಾಗಿತ್ತು. ಈಗ ಮತ್ತೆ ಮನೋಹನರ್‌ ಪರಿಕ್ಕರ್‌ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ.

No Comments

Leave A Comment