Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ವಿಶ್ವಕಪ್‌ ಶೂಟಿಂಗ್‌ನಲ್ಲಿ ಎರಡನೇ ಚಿನ್ನ ಗೆದ್ದ ಮನು ಭಾಕರ್‌

ಹೊಸದಿಲ್ಲಿ : ಮಕ್ಸಿಕೋ ದ ಗ್ವಾದಲಾಯರಾದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್‌ ವಿಶ್ವಕಪ್‌ ಕೂಟದಲ್ಲಿ  ಹರಿಯಾಣದ ಜಜ್ಜರ್‌ನ ಹದಿನಾರರ ಹರೆಯದ ಮನು ಭಾಕರ್‌ ಅವರು ಮಿಶ್ರ ತಂಡ ಸ್ಪರ್ಧೆಯಲ್ಲಿ ನಿರಂತರ ಎರಡನೇ ಚಿನ್ನ ಗೆದ್ದಿದ್ದಾರೆ. ಈ ಸಾಧನೆಯ ಮೂಲಕ ಕೂಟದಲ್ಲಿನ ತನ್ನ ಸ್ಥಾನವನ್ನು ಭಾರತ ಇನ್ನಷ್ಟು ಬಲಪಡಿಸಿಕೊಂಡಿದೆ.

ಓಂ ಪ್ರಕಾಶ್‌ ಮಿಥರ್‌ವಾಲ್‌ ಜತೆಗೂಡಿರುವ ಮನು ಭಾಕರ್‌ ಅವರು 10ಎಂ ಏರ್‌ ಪಿಸ್ಟಲ್‌ ಮಿಶ್ರ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡರು. ಒಂದು ದಿನದ ಹಿಂದಷ್ಟೇ ಮನು ಭಾಕರ್‌ 10ಎಂ ಏರ್‌ ಪಿಸ್ಟಲ್‌ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದರು. ಆ ಮೂಲಕ ಆಕೆಗೆ ಇದು ಅತ್ಯಂತ ಸ್ಮರಣೀಯ ಚೊಚ್ಚಲ ವಿಶ್ವ ಕಪ್‌ ಎನಿಸಿತು.

ಭಾರತಕ್ಕೆ ಹಿರಿಯರ ವಿಶ್ವಕಪ್‌ ಚಿನ್ನ ಗೆದ್ದುಕೊಟ್ಟ ಅತೀ ಕಿರಿಯ ಕ್ರೀಡಾಪಟ್ಟು ಆಗಿರುವ ಮನು ಭಾಕರ್‌ ಈಗಿನ್ನೂ 11ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ. ಆದರೆ ಇದನ್ನು ನ್ಯಾಶನಲ್‌ ರೈಫ‌ಲ್‌ ಅಸೋಸಿಯೇಶನ್‌ ಆಫ್ ಇಂಡಿಯಾ (ಎನ್‌ಆರ್‌ಎಐ) ಈಗಿನ್ನೂ ದೃಢೀಕರಿಸಬೇಕಿದೆ.

ದೀಪಕ್‌ ಕುಮಾರ್‌ ಮತುತ ಮೆಹುಲಿ ಘೋಷ್‌ ಅವರು 10ಎಂ ಏರ್‌ರೈಫ‌ಲ್‌ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಆರನೇ ಪದಕವನ್ನು ಗೆದುಕೊಡುವ ಸಾಧನೆ ಮಾಡಿದರು.

No Comments

Leave A Comment