Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಗುಜರಾತ್: ಕಾಲುವೆಗೆ ಉರುಳಿಬಿದ್ದ ಮದುವೆ ದಿಬ್ಬಣದ ಟ್ರಕ್: 26 ಸಾವು

ಭಾವ್ ನಗರ: ಮದುವೆ ದಿಬ್ಬಣದ ಟ್ರಕ್ಕೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಸುಮಾರು 26 ಮಂದಿ ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಭಾವನಗರ-ರಾಜಕೋಟ್‌ ಹೆದ್ದಾರಿಯಲ್ಲಿ ನಡೆದಿದೆ.ಮೃತಪಟ್ಟವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ.

ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮಗುಚಿಬಿದ್ದ ಟ್ರಕ್‌ನ ಅಡಿಯಲ್ಲಿ ಹಲವರು ಸಿಕ್ಕಿಬಿದ್ದಿದ್ದಾರೆ,ಪೊಲೀಸರು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಗಾಯಗೊಂಡಿರುವ 12 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದುರಂತದ ಮಾಹಿತಿ ಬಂದ ಕೂಡಲೇ ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು ಭಾವನಗರ, ಸಿಹೋರ್ ಮತ್ತು ಬೋಟಾಡ್‌ನಿಂದ ಕ್ರೇನ್‌ ಹಾಗೂ ಇತರ ಪರಿಕರಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.

ಮದುವೆ ದಿಬ್ಬಣವನ್ನು ಕರೆದೊಯ್ಯುತ್ತಿದ್ದ ಈ ಟ್ರಕ್‌ನಲ್ಲಿ ಸುಮಾರು 60 ಮಂದಿ ಪ್ರಯಾಣಿಕರಿದ್ದರು. ಭಾಗವನಗರ- ರಾಜಕೋಟ್‌ ಹೆದ್ದಾರಿಯಲ್ಲಿ ಉಮ್ರಲಾ ಬಳಿ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್‌ ಒಣಗಿದ ಕಾಲುವೆಗೆ ಉರುಳಿಬಿತ್ತು.

No Comments

Leave A Comment