Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ತುಘಲಕ್ ಸರ್ಕಾರ ಕಿತ್ತೊಗೆಯಿರಿ: ನಳಿನ್‌ಕುಮಾರ್ ಕಟೀಲ್

ಸುಳ್ಯ: ‘ಹಿಂದೂ ವಿರೋಧಿ ನೀತಿ ಪಾಲಿಸುತ್ತಿರುವ ಸಿದ್ದರಾಮಯ್ಯ ಅವರ ತುಘಲಕ್ ಸರ್ಕಾರವನ್ನು ಕಿತ್ತೊಗೆಯಬೇಕಿದೆ’ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.

ಭಾನುವಾರ ಸುಳ್ಯದ ಬೊಳುಬೈಲ್‌ನಲ್ಲಿ ನಡೆದ ಜನಸುರಕ್ಷಾ ಯಾತ್ರೆ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ‘ಹಿಂದೂ ಕಾರ್ಯಕರ್ತರ ಕೊಲೆಗೆ ಮತಾಂಧ ಶಕ್ತಿಗಳಿಗೆ ಕುಮ್ಮಕ್ಕು ನೀಡುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಚ ರಾಜಕಾರಣ ನಡೆಸುತ್ತಿದೆ. ಇವರಿಂದ ಹಿಂದೂಗಳಿಗೆ ಉಳಿಗಾಲವಿಲ್ಲ’ ಎಂದರು.

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜೀವ ಮಠಂದೂರು, ಪ್ರಧಾನ ಕಾರ್ಯದರ್ಶಿ ಸುದರ್ಶನ ಮೂಡುಬಿದಿರೆ, ಉಪಾಧ್ಯಕ್ಷರಾದ ಬ್ರಿಜೇಶ್ ಚೌಟ, ಭಾಗೀರಥಿ ಮುರುಳ್ಯ, ಹಿಂದುಳಿದ ಮೋರ್ಚಾದ ಸತ್ಯಜಿತ್ ಸುರತ್ಕಲ್, ಅಪ್ಪಯ್ಯ ಮಣಿಯಾಣಿ, ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಸುಬೋದ್ ಶೆಟ್ಟಿ, ವೆಂಕಟ್ ದಂಬೆಕೋಡಿ ಇದ್ದರು.

ಸ್ತಬ್ಧಚಿತ್ರ ವಶಕ್ಕೆ

ಬಿಜೆಪಿ ಜನಸುರಕ್ಷಾ ಯಾತ್ರೆಯೊಂದಿಗೆ ಸುಳ್ಯಕ್ಕೆ ಬಂದಿದ್ದ ಸ್ತಬ್ಧಚಿತ್ರವನ್ನು ಶನಿವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸರ್ಕಾರ ಹಾಗೂ ಮುಖ್ಯಮಂತ್ರಿ ಓಲೈಕೆ ರಾಜಕಾರಣದ ಸ್ತಬ್ಧಚಿತ್ರ ಇದಾಗಿತ್ತು. ಆದರೆ ಶಾಂತಿ, ಸೌಹಾರ್ದಕ್ಕೆ ಧಕ್ಕೆ ಬರುತ್ತದೆ, ಸಂಘಟಕರು ಅನುಮತಿ ಪಡೆಯಲಿಲ್ಲ ಎನ್ನುವ ಕಾರಣಕ್ಕೆ ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

No Comments

Leave A Comment