Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಆಸ್ಕರ್ ಪ್ರಶಸ್ತಿ 2018; ದ ಶೇಪ್ ಆಫ್ ವಾಟರ್ ಅತ್ಯುತ್ತಮ ಚಿತ್ರ/Oscars 2018: Meet the BIG Winners!

ಲಾಸ್ ಏಂಜಲೀಸ್:ಅಮೆರಿಕದ ಲಾಸ್ ಏಂಜಲೀಸ್ ನ ಡೋಲ್ಬೈ ಥಿಯೇಟರ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರತಿಷ್ಠಿತ 90ನೇ ಆಸ್ಕರ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ  ಗಿಲ್ಲೆರ್ಮೊ ಡೆಲ್ ಟೊರೊ ನಿರ್ದೇಶನದ “ದ ಶೇಪ್ ಆಫ್ ವಾಟರ್”  ಸಿನಿಮಾ 2018ನೇ ಸಾಲಿನ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ

13 ಕೆಟಗರಿಯಲ್ಲಿ ದ ಶೇಪ್ ಆಫ್ ವಾಟರ್ ಸಿನಿಮಾ ನಾಲ್ಕು ಪ್ರಶಸ್ತಿಯನ್ನು ಬಾಚಿಕೊಂಡಿದೆ. ಗಿಲ್ಲೆರ್ಮೊ ಡೆಲ್ ಟೊರೊ ಬೆಸ್ಟ್ ಡೈರೆಕ್ಟರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಹಾಲಿವುಡ್ ನ ಫ್ರಾನ್ಸಿಸ್ ಮೆಕ್ ಡೊರ್ಮಾಂಡ್ ತ್ರೀ ಬಿಲ್ ಬೋರ್ಡ್ಸ್ ಔಟ್ ಸೈಡ್ ಎಬ್ಬಿಂಗ್ ಸಿನಿಮಾದಲ್ಲಿನ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಆಸ್ಕರ್ ಪ್ರಶಸ್ತಿಯ ಪಟ್ಟಿ ಈ ರೀತಿ ಇದೆ:
ಬೆಸ್ಟ್ ಸಿನಿಮಾ: ದ ಶೇಪ್ ಆಫ್ ವಾಟರ್
ಅತ್ಯುತ್ತಮ ನಟಿ: ಫ್ರಾನ್ಸಿಸ್ ಮೆಕ್ ಡೊರ್ಮಾಂಡ್ (ತ್ರೀ ಬಿಲ್ ಬೋರ್ಡ್ಸ್ ಔಟ್ ಸೈಡ್ ಎಬ್ಬಿಂಗ್ ಸಿನಿಮಾ)
ಅತ್ಯುತ್ತಮ ನಟ: ಗ್ಯಾರಿ ಓಲ್ಡ್ ಮ್ಯಾನ್ (Darkest Hour)
ಅತ್ಯುತ್ತಮ ನಿರ್ದೇಶಕ: ಗಿಲ್ಲೆರ್ಮೊ ಡೆಲ್ ಟೊರೊ( ದ ಶೇಪ್ ಆಫ್ ವಾಟರ್ ಚಿತ್ರ)
ಅತ್ಯುತ್ತಮ ಸ್ಕೋರ್ ಅಲೆಕ್ಸಾಂಡ್ರೆ ಡೆಸ್ ಪ್ಲಾಟ್ ಗೆ (ದ ಶೇಪ್ ಆಫ್ ವಾಟರ್)
ಬ್ಲೇಡ್ ರನ್ನರ್ 2049 ಸಿನಿಮಾದ ರೋಜರ್ ಎ. ಡೀಕಿನ್ಸ್ ಅವರಿಗೆ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಲಭಿಸಿದೆ.
ಜೋರ್ಡಾನ್ ಪೀಲೆ ನಿರ್ದೇಶನದ ಗೆಟ್ ಔಟ್ ಸಿನಿಮಾಕ್ಕೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ.

No Comments

Leave A Comment