Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಥಾಣೆಯಲ್ಲಿ ಹಿಸ್ಟರಿ ಶೀಟರ್‌ ಕೊಲೆ; ಕತ್ತು ಸೀಳಲ್ಪಟ್ಟ ಶವ ಪತ್ತೆ

ಥಾಣೆ : ಹಲವಾರು ಕ್ರಿಮಿನಲ್‌ ಆರೋಪಗಳನ್ನು ಹೊತ್ತಿದ್ದ 23ರ ಹರೆಯದ ಬಬ್ಲೂ ಚೌರಾಶಿಯಾ ಎಂಬಾತ ಕೊಲೆಗೀಡಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಬ್ಲೂ ಮೃತ ದೇಹ ನಿನ್ನೆ ಗುರುವಾರ ರಾತ್ರಿ 9 ಗಂಟೆಗೆ ಉಲ್ಲಾಸನಗರ ಪಟ್ಟಣದಲ್ಲಿ ಪತ್ತೆಯಾಗಿತ್ತು. ಆತನ ದೇಹದ ಮೇಲೆ ಹಲವಾರು ಇರಿತದ ಗಾಯಗಳಿದ್ದವು; ಆತನ ಕತ್ತನ್ನು ಸೀಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಬ್ಲೂ ಚೌರಾಶಿಯಾ ವಿರುದ್ಧ ಕೊಲೆ, ಕೊಲೆ ಯತ್ನ, ಸುಲಿಗೆ ಮುಂತಾದ ಕ್ರಿಮಿನಲ್‌ ಕೇಸುಗಳು ಇದ್ದವು.

ಬಬ್ಲೂ ಕೊಲೆ ಸಂಬಂಧ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

No Comments

Leave A Comment