Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಆಂಧ್ರಪ್ರದೇಶ : ಬಾಲಕನನ್ನು ಕಚ್ಚಿ ಸಾಯಿಸಿದ ಬೀದಿ ನಾಯಿಗಳು

ಹೈದರಾಬಾದ್‌ : ಅತ್ಯಂತ ಆಘಾತಕಾರಿ ಘಟನೆಯೊಂದರಲ್ಲಿ  ಆಂಧ್ರಪ್ರದೇಶದಲ್ಲಿ  9 ವರ್ಷ ಪ್ರಾಯದ ಬಾಲಕನನ್ನು ಬೀದಿ ನಾಯಿಗಳು ಕಚ್ಚಿ ಸಾಯಿಸಿವೆ.

ನಾಯಿಗಳ ದಾಳಿಗೆ ಗುರಿಯಾದ ಬಾಲಕ ಆರ್‌ ಜಸ್ವಂತ್‌ ಎಂಬಾತನನ್ನು ಒಡನೆಯೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆತ ಅಲ್ಲಿ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟ. ಬಾಲಕನು ವಿಶಾಖಪಟ್ಟಣದಿಂದ ಸುಮಾರು 150 ಕಿ.ಮೀ. ಉತ್ತರಕ್ಕಿರುವ ಬಲಿಜಿಪೇಟ ಸಮೀಪದ ಅಮ್ಮಪಳ್ಳಿ ಗ್ರಾಮದ ನಿವಾಸಿಯಾಗಿದ್ದಾನೆ.

ಕೇರಳ, ದಿಲ್ಲಿಯಂತೆ ಆಂಧ್ರಪ್ರದೇಶದಲ್ಲೂ ಬೀದಿ ನಾಯಿಗಳ ಹಾವಳಿ ತೀವ್ರವಿದೆ. ಕೇರಳವೊಂದರಲ್ಲೇ ಈ ವರ್ಷ 53,000 ಜನರ ಮೇಲೆ ಬೀದಿನಾಯಿಗಳು ದಾಳಿ ಮಾಡಿವೆ ಕಚ್ಚಿವೆ. ಬೀದಿ ನಾಯಿಗಳ ಹಾವಳಿ ತೀವ್ರವಾದಾಗ ಸ್ಥಳೀಯಾಡಳಿತೆಗಳು ಶ್ವಾನ ಸಂಹಾರಕ್ಕೆ ಮುಂದಾಗುತ್ತವೆ. ಆಗ ಅದರ ವಿರುದ್ಧ ಧ್ವನಿ ಎತ್ತುವ ಪ್ರಾಣಿ ದಯಾ ಸಂಘದವರು, ನಾಯಿಗಳನ್ನು ಕೊಲ್ಲುವ ಬದಲು ಅವುಗಳ ಸಂತಾನ ಹರಣ ಅಭಿಯಾನ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಾರೆ.

No Comments

Leave A Comment