Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಸಚಿವರಿಂದ ಸಾಲ ಸೌಲಭ್ಯಗಳ ಮಂಜೂರಾತಿ ಪತ್ರ ಬಿಡುಗಡೆ

ಉಡುಪಿ :ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಸೇವೆ ಮತ್ತು ಸಹಾಯ ಮಾಡುವುದು ಸರಕಾರದ ಕರ್ತವ್ಯವಾಗಿದ್ದು, ಶತ ಶತಮಾನಗಳಿಂದ ಶೋಷಣೆಗೊಳಗಾಗಿ ನೋವುಂಡ ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ವರ್ಗವನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಮೀನುಗಾರಿಕೆ, ಯುವಸಬಲೀಕರಣ, ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಉಡುಪಿ ಮದರ್ ಆಫ್ ಸ್ಯಾರೋಸ್ ಚರ್ಚ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ರಿ) ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ (ರಿ) ಉಡುಪಿ ಇದರ ವತಿಯಿಂದ ವಿವಿಧ ಸಾಲ ಸೌಲಭ್ಯಗಳ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಿ ಮಾತನಾಡಿದರು.

ಜನಸಾಮಾನ್ಯರ ಹಿತದೃಷ್ಟಿಯಿಂದ ರಸ್ತೆ, ಸೇತುವೆ, ಕುಡಿಯುವ ನೀರು, ಅನ್ನಭಾಗ್ಯ, ಬಿಪಿಎಲ್ ಕಾರ್ಡ್, ಪಶುಭಾಗ್ಯ ಮುಂತಾದ ಹಲವಾರು ಯೋಜನೆಗಳನ್ನು ರಾಜ್ಯ ಸರಕಾರ ಕರುಣಿಸಿದೆ. ಅದರಲ್ಲಿ ವಿಶೇಷವಾಗಿ ಅಲ್ಪಸಂಖ್ಯಾತರ ಅಭಿವೃದ್ದಿ ಮತ್ತು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ವಿವಿಧ ಯೋಜನೆಗಳ ಮೂಲಕ ಸ್ವ – ಉದ್ಯೋಗಕ್ಕೆ ಸಾಲ ಸೌಲಭ್ಯಗಳು ಸಿಗುತ್ತಿದ್ದು, ಸಾಲವನ್ನು ಯಾವ ಉದ್ದೇಶಕ್ಕಾಗಿಯೇ ಪಡೆದುಕೊಳ್ಳುತ್ತಿದ್ದಿರೋ ಆ ಉದ್ದೇಶಕ್ಕಾಗಿಯೇ ವಿನಿಯೋಗಿಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಸಚಿವರು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಯೋಜನೆಯಿಂದ ಶ್ರಮಶಕ್ತಿ ಯೋಜನೆಯಲ್ಲಿ 162 ಜನರಿಗೆ 40.50 ಲಕ್ಷ ರೂ, 24 ಫಲಾನುಭವಿಗಳಿಗೆ ಕಿರಿಸಾಲ 2.40 ಲಕ್ಷ, 6 ಜನರಿಗೆ ಸ್ವಯಂ ಉದ್ಯೋಗಕ್ಕೆ ಒಟ್ಟು 3.80 ಲಕ್ಷ, ಅರಿವು ಯೋಜನೆಯಡಿ 121 ಫಲಾನುಭವಿಗಳಿಗೆ 47.57 ಲಕ್ಷ ಒಟ್ಟು 313 ಜನರಿಗೆ 94.27 ಲಕ್ಷ ರೂಗಳ ಅನುದಾದ ಮಂಜೂರಾತಿ ಪತ್ರವನ್ನು ವಿತರಿಸಿದರು.

ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಯೋಜಯಿಂದ ಡಿ ದೇವರಾಜ ಅರಸು ವೈಯಕ್ತಿಕ ಸ್ವಯಂ ಉದ್ಯೋಗ ಸಾಲ ಯೋಜನೆಯಡಿ 49 ಜನ ಫಲಾನುಭವಿಗಳಿಗೆ 25 ಲಕ್ಷ ರೂ, ಸಾಂಪ್ರದಾಯಿಕ ಯೋಜನೆಯಡಿ 11 ಜನರಿಗೆ 7.05 ಲಕ್ಷ, ವಿಧವೆಯರಿಗೆ ಆರ್ಥಿಕ ನೆರವು ಯೋಜನೆಯಡಿ 04 ಜನರಿಗೆ 1.60 ಲಕ್ಷ, ಸಾರಾಯಿ ಮಾರಾಟ ನಿಷೇಧದಿಂದಾಗಿ ನಿರುದ್ಯೋಗಿಗಳಿಗೆ ಆರ್ಥಿಕ ನೆರವು ಯೋಜನೆಯಡಿ 8 ಜನರಿಗೆ 4 ಲಕ್ಷ, ಗಂಗಾಕಲ್ಯಾಣ ಯೋಜನೆಯಡಿ 18 ಜನರಿಗೆ 27 ಲಕ್ಷ, ಒಟ್ಟು 90 ಜನ ಫಲಾನುಭವಿಗಳಿಗೆ 64.65 ಲಕ್ಷ ರೂ ಅನುದಾನವನ್ನು ಪತ್ರವನ್ನು ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ ಗಫೂರು, ಕಾಂಗ್ರೆಸ್ ಬ್ಲಾಕ್ ಸಮಿತಿಯ ಆಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ನಗರಸಭಾ ಸದಸ್ಯ ಗಣೇಶ್ ನೆರ್ಗಿ, ಮಾಜಿ ನಗರ ಸಭಾ ಸದಸ್ಯ ಪ್ರಕಾಶ್, ಧರ್ಮಗುರುಗಳಾದ ವಲೇರಿಯನ್ ಮೆಂಡೋನ್ಸ್ ಉಪಸ್ಥಿತರಿದ್ದರು.

ಮಹಮ್ಮದ್ ಸಫ್ವಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

No Comments

Leave A Comment