Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಬೇಲ್ ಇಲ್ಲ; ನಲಪಾಡ್ ಮೊಹಮ್ಮದ್ ಹ್ಯಾರಿಸ್ ಗೆ ಇಂದೂ ಜೈಲೇ ಗತಿ

ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 63ನೇ ಸೆಷನ್ಸ್ ಕೋರ್ಟ್ ಸೋಮವಾರ ಮತ್ತೆ ಜಾಮೀನು ನಿರಾಕರಿಸಿದೆ.

ನಲಪಾಡ್ ಗೆ ಜಾಮೀನು ನೀಡಬೇಕು, ಇದೊಂದು ಆಕಸ್ಮಿಕ ಘಟನೆ. ಉದ್ದೇಶಪೂರ್ವಕ ಘಟನೆ ಅಲ್ಲ, ಅದಕ್ಕೆ ಬೇಕಾದ ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲ ಎಂದು ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದರು.

ಹಲ್ಲೆಗೊಳಗಾದ ವಿದ್ವತ್ ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಇಂತಹ ಸಂದರ್ಭದಲ್ಲಿ ನಲಪಾಡ್ ಗೆ ಜಾಮೀನು ನೀಡಬಾರದೆಂದು ಎಸ್ ಪಿಪಿ ಶ್ಯಾಮಸುಂದರ್ ಪ್ರತಿವಾದ ಮಂಡಿಸಿದ್ದರು. ಬಳಿಕ ಕೋರ್ಟ್ ಜಾಮೀನು ನೀಡದೆ ವಿಚಾರಣೆ ಮುಂದೂಡಿದೆ.

No Comments

Leave A Comment