Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಮಾಜಿ ಸಂಪುಟ ಕಾರ್ಯದರ್ಶಿ TSR ಸುಬ್ರಮಣಿಯನ್‌ ಇನ್ನಿಲ್ಲ

ಹೊಸದಿಲ್ಲಿ : ಮಾಜಿ ಸಂಪುಟ ಕಾರ್ಯದರ್ಶಿ ಟಿಎಸ್‌ಆರ್‌ ಸುಬ್ರಮಣಿಯನ್‌ ಇಂದು ಸೋಮವಾರ ನಿಧನ ಹೊಂದಿದರು.

ಮಧ್ಯಮ ವರ್ಗದ ತಮಿಳು ಕುಟುಂಬವೊಂದರಲ್ಲಿ ಜನಿಸಿದ್ದ ಸುಬ್ರಮಣಿಯನ್‌  ತಮ್ಮ ಶಾಲಾ ಶಿಕ್ಷಣವನ್ನು ತಂಜಾವೂರ್‌ನಲ್ಲಿ ನಡೆಸಿದ್ದರು.

ಕಲ್ಕತ್ತಾ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಆ ಬಳಿಕ ಲಂಡನಿನ ಇಂಪೀರಿಯಲ್‌ ಕಾಲೇಜ್‌ ಆಫ್ ಸಯನ್ಸ್‌ ಮತ್ತು ಟೆಕ್ನಾಲಜಿಯಲ್ಲಿ ಅಧ್ಯಯನ ನಡೆಸಿದ್ದರು. ಹಾರ್ವರ್ಡ್‌ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತೆಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಅವರು ಪಡೆದಿದ್ದರು.

ಸುಬ್ರಮಣಿಯನ್‌ ನಿಧನಕ್ಕೆ ಶೋಕ ವ್ಯಕ್ತಪಡಿಸಿ ಟ್ವೀಟ್‌ ಮಾಡಿರುವ ಐಎಎಸ್‌ ಅಸೋಸಿಯೇಶನ್‌, “ಸುಬ್ರಮಣಿಯನ್‌ ನಿಧನದಿಂದಾಗಿ ಇಡಿಯ ಐಎಎಸ್‌ ಸಮುದಾಯಕ್ಕೆ ಮತ್ತು ದೇಶಕ್ಕೆ ಭಾರೀ ದೊಡ್ಡ ನಷ್ಟವಾಗಿದೆ; ಇಡಿಯ ಐಎಎಸ್‌ ಸಮುದಾಯದಲ್ಲಿ ಅವರದ್ದು ಭಾರೀ ದೊಡ್ಡ ವ್ಯಕ್ತಿತ್ವ’ ಎಂದು ಹೇಳಿದೆ.

ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್‌ ಅವರು ಸುಬ್ರಮಣಿಯನ್‌ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

No Comments

Leave A Comment