Log In
BREAKING NEWS >
ಮಾರ್ಚ್ 23 ರಿಂದ ಏಪ್ರಿಲ್ 6 ವರಗೆ SSLC ಪರೀಕ್ಷೆ ನಡೆಯಲಿದೆ. ಪರೀಕ್ಷೆ ದಿನಾ ಬೆಳಿಗ್ಗೆ 9 ರಿಂದ 1:30 ರ ವರೆಗೆ ನಡೆಯಲಿದೆ........ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಮೋಹಕ ತಾರೆ ಶ್ರೀದೇವಿ ಹೃದಯಾಘಾತದಿಂದ ವಿಧಿವಶ

ದುಬೈ: ಬಾಲಿವುಡ್‌ ಸೇರಿದಂತೆ ಬಹುಭಾಷಾ ಚಿತ್ರಗಳಲ್ಲಿ ನಟಿಸಿದ ಪ್ರಖ್ಯಾತ ನಟಿ ಶ್ರೀದೇವಿ ಅವರು ಹಠಾತ್‌ ಶನಿವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. ದುಬೈನಲ್ಲಿ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.

ಶ್ರೀದೇವಿ ಅವರು ಕೊನೆಯುಸಿರೆಳೆಯುವ ವೇಳೆ ಪತಿ ಬೋನಿ ಕಪೂರ್‌ ಮತ್ತು ಕಿರಿಯ ಪುತ್ರಿ ಖುಷಿ ಅವರು ಸ್ಥಳದಲ್ಲಿದ್ದರು.

1963 ರಲ್ಲಿ ಜನಿಸಿದ್ದ ಶ್ರೀದೇವಿ 4 ರ ಹರೆಯದಲ್ಲಿ ಬಾಲನಟಿಯಾಗಿ ಬಣ್ಣದ ಬದುಕಿಗೆ ಕಾಲಿರಿಸಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದ ಅವರು 1978 ರಲ್ಲಿ  ಸೋಲ್ವಾ ಸಾವನ್‌ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದರು. ಹಿಮ್ಮತ್‌ವಾಲಾ, ಮಿಸ್ಟರ್‌ ಇಂಡಿಯಾ , ಚಾಂದಿನಿ ಅವರ ಸೂಪರ್‌ ಹಿಟ್‌ ಚಿತ್ರಗಳು. 2012 ರಲ್ಲಿ ಮತ್ತೆ ಬಣ್ಣದ ಬದುಕಿಗೆ ಮರಳಿದ್ದ ಶ್ರೀದೇವಿ ಇಂಗ್ಲೀಷ್‌ ವಿಂಗ್ಲೀಷ್‌ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.

2013ರಲ್ಲಿ ಶ್ರೀದೇವಿ ಅವರಿಗೆ ಪದ್ಮಶ್ರಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು. ಮಾಮ್‌ ಅವರ ಕೊನೆಯ ಚಿತ್ರವಾಗಿದೆ.

ನೆಚ್ಚಿನ ನಟಿಯ ಅಗಲುವಿಕೆಯ ಸುದ್ದಿ ತಿಳಿಯುತ್ತಿದ್ದಂತೆ ಮುಂಬಯಿಯ ಅಂಧೇರಿ ನಿವಾಸದ ಬಳಿ ಸಿನಿರಂಗದ ಗಣ್ಯರು ಮತ್ತು ಸಾವಿರಾರು ಅಭಿಮಾನಿಗಳು ಜಮಾವಣೆಗೊಂಡಿದ್ದಾರೆ.

ಶ್ರೀದೇವಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಾಲಿವುಡ್‌ ನಟರು ತೀವ್ರ ಕಂಬನಿ ಮಿಡಿದಿದ್ದಾರೆ.

ಪಾರ್ಥೀವ ಶರೀರವನ್ನು ವಿಶೇಷ ವಿಮಾನದಲ್ಲಿ ಮುಂಬಯಿಗೆ ತರಲಾಗುತ್ತಿದೆ.

No Comments

Leave A Comment