Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಮಲ್ಪೆ:ಮೀನುಗಾರಿಕಾ ಅಭಿವೃದ್ಧಿಗೆ ರಾಷ್ಟ್ರೀಯ ನೀತಿ- ಬೃಹತ್‌ ಬಿಜೆಪಿ ಮೀನುಗಾರರ ಸಮಾವೇಶದಲ್ಲಿ ಅಮಿತ್‌ ಶಾ

ಮಲ್ಪೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಮಗ್ರ ಮೀನುಗಾರರ ಅಭಿವೃದ್ಧಿ ಗುರಿ ಇರಿಸಿಕೊಂಡು ರಾಷ್ಟ್ರೀಯ ಮೀನುಗಾರಿಕಾ ನೀತಿ ರೂಪಿಸಲಾಗುತ್ತಿದೆ. ಇದಕ್ಕಾಗಿ ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವನ್ನು ಸ್ಥಾಪಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದರು.

ಮಲ್ಪೆ ಕಡಲ ಕಿನಾರೆಯಲ್ಲಿ ಮಂಗಳ ವಾರ ಬೃಹತ್‌ ಮೀನುಗಾರರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಯ್ಯಪ್ಪನ್‌ ನೇತೃತ್ವದ ಸಮಿತಿ ಶಿಫಾರಸಿನಂತೆ ರಾಷ್ಟ್ರೀಯ ನೀತಿ ಜಾರಿಗೊಳಿಸಲಾಗುತ್ತದೆ. ಇದರಲ್ಲಿ ಮೀನುಗಾರರ ಮನೆಗಳ ನಿರ್ಮಾಣವೂ ಒಳಗೊಂಡಿದೆ. ಇದರ ಪ್ರಕಾರ 75,000 ರೂ. ಇದ್ದ ನೆರವು 1.2 ಲ.ರೂ.ಗೆ ಏರಿಸುವ ಗುರಿ ಇರಿಸಲಾಗಿದೆ ಎಂದರು.

ನೀಲಿಕ್ರಾಂತಿ,
ಸಾಗರಮಾಲಾ ಯೋಜನೆ

ಮೀನುಗಾರಿಕೆಯ ಸಮಗ್ರ ಅಭಿವೃದ್ಧಿಗೆ ನೀಲಿಕ್ರಾಂತಿ (ಬ್ಲೂ ರೆವೊ ಲ್ಯು ಶನ್‌) ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೊಳಿಸುವುದಾಗಿ ಬಜೆಟ್‌ನಲ್ಲಿ  ಘೋಷಿಸಿದ್ದಾರೆ. ಬಂದರುಗಳನ್ನು ರಾಷ್ಟ್ರೀಯ ಹೆದ್ದಾರಿ ಜತೆ ಸೇರಿಸುವ ಸಾಗರ್‌ ಮಾಲಾ ಯೋಜನೆಯನ್ನು ಕೇಂದ್ರ ಜಾರಿಗೊಳಿಸುತ್ತಿದೆ. ಇವೆಲ್ಲದರ ಅನುಷ್ಠಾನಕ್ಕೆ ಸಿದ್ದರಾಮಯ್ಯ ಸರಕಾರ ತಡೆಯೊಡ್ಡುತ್ತಿದೆ ಎಂದು ಆರೋಪಿಸಿದರು.

ಮೀನುಗಾರರಿಗೆ ಕ್ರೆಡಿಟ್‌ ಕಾರ್ಡ್‌ 
ರೈತರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ವಿತರಿಸಿದಂತೆ ಮೀನುಗಾರರಿಗೆ ಕ್ರೆಡಿಟ್‌ ಕಾರ್ಡ್‌ ನೀಡಲಿದ್ದೇವೆ. ಇದರಿಂದ 15,000 ರೂ. ವರೆಗೆ ಖಾತಾದಾರರು ಬಳಸಿ ಕೊಳ್ಳಬಹುದಾಗಿದೆ. ಇದುವರೆಗೆ 19 ರೂ. ಪ್ರೀಮಿಯಂ ಕಟ್ಟಿದರೆ 1 ಲ.ರೂ. ದೊರಕುತ್ತಿದ್ದ ವಿಮಾ ಯೋಜನೆ ಯನ್ನು ಪರಿಷ್ಕರಿಸಿ 20 ರೂ. ಪ್ರೀಮಿಯಂ ಕಟ್ಟಿದರೆ 2 ಲ.ರೂ. ವಿಮಾ ಮೊತ್ತ ದೊರಕುವ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಅಮಿತ್‌ ಶಾ ಹೇಳಿದರು.

ಮೀನುಗಾರರು ಎಸ್‌ಸಿಗೆ: ಮನವಿ
ಮೀನುಗಾರರನ್ನು ಪರಿಶಿಷ್ಟ ಜಾತಿಗೆ ಸೇರಿಸುವುದರ ಬಗೆಗೆ ಜಿ. ಶಂಕರ್‌ ಅವರು ಈಗಾಗಲೇ ಅಮಿತ್‌ ಶಾ ಅವರಿಗೆ ಮನವಿ ಕೊಟ್ಟಿದ್ದು ಇದರ ಬಗೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಯಡಿಯೂರಪ್ಪ ಹೇಳಿದರು.

ಈ ಸಾಲಿನಲ್ಲಿ ಮೀನುಗಾರಿಕಾ ಅಭಿವೃದ್ಧಿಗೆ ಕೇಂದ್ರ ಸರಕಾರ 10,000 ಕೋ.ರೂ. ಅನುದಾನವನ್ನು ತೆಗೆ ದಿರಿಸಿದೆ. ಮೀನುಗಾರ ಗುಂಪು ಗಳಿಗೆ ಸಹಾರ, ಆರೋಗ್ಯ, ಸ್ವತ್ಛತೆ ದೃಷ್ಟಿಯಿಂದ ಶೌಚಾಲಯ ನಿರ್ಮಾಣ ಇತ್ಯಾದಿ ಯೋಜನೆಗಳನ್ನು ಜಾರಿ ಗೊಳಿಸ ಬೇಕಾಗಿದೆ ಎಂದ ಯಡಿಯೂರಪ್ಪ ನವರು ತನ್ನ ಸರಕಾರ ಹಿಂದೆ ಇದ್ದಾಗ ಮೊಗವೀರರು ನಂಬಿಕೊಂಡು ಬಂದ ದೇವಸ್ಥಾನಗಳಿಗೆ ನೀಡಿದ ಅನುದಾನ, ನಷ್ಟದಲ್ಲಿದ್ದ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮಕ್ಕೆ 10 ಕೋ.ರೂ. ನೀಡಿ ಪುನಶ್ಚೇತನಗೊಳಿಸಿದ್ದನ್ನು ನೆನಪಿಸಿ ಕೊಂಡರು.  ವಿದ್ಯುತ್‌ ಕಡಿತ ಮಾಡುವ ಮೂಲಕ ಇಂದಿನ ಕಾರ್ಯಕ್ರಮವನ್ನು ಟಿವಿ ಚಾನೆಲ್‌ನಲ್ಲಿ ನೋಡದಂತೆ ಮಾಡುತ್ತಿದ್ದಾರೆಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಬಡ ಮಹಿಳೆಯರಿಗೆ ಒಣಮೀನು ಒಣಗಿಸಲು ಅವಕಾಶ ಕೊಡುತ್ತಿಲ್ಲ. ಆದರೆ ಸಚಿವರಿಗೆ ಸರಕಾರಿ ಜಾಗದಲ್ಲಿ ಕಾರ್ಖಾನೆ ನಿರ್ಮಿಸಲು ಆಗುತ್ತದೆ, ಇದಕ್ಕೆ ಇನ್ನೂ ಅನುಮತಿ ಇಲ್ಲ. ಇದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಮಾಜಿ ಸಚಿವ ಜಯಪ್ರಕಾಶ್‌ ಹೆಗ್ಡೆ ಹೇಳಿದರು.

ಆರ್ಥಿಕ ಅಪರಾಧಿಗಳು, ದಾರಿ ತಪ್ಪಿದ ರಾಜಕಾರಣಿಗಳು ಆತಂಕಕ್ಕೆ ಒಳ ಗಾದರೆ ಆ ರಾಷ್ಟ್ರದ ಆಡಳಿತ ಉತ್ತಮ ಎಂದು ಚಾಣಕ್ಯ ಹೇಳಿದಂತೆ ಈಗಿನ ಮೋದಿ ಸರಕಾರ ನಡೆದುಕೊಳ್ಳುತ್ತಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಈಗಿನ ಸಚಿವರಿಂದ ಮೀನುಗಾರರಿಗೆ ಯಾವುದೇ ಸವಲತ್ತು ದೊರಕಲಿಲ್ಲ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್‌ ಹೇಳಿದರು.

ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಮುರಳೀಧರ ರಾವ್‌, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ವಿ. ಸುನಿಲ್‌ ಕುಮಾರ್‌, ಮಾಜಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್‌, ಸಂಘಟಕರಾದ ಯಶಪಾಲ್‌ ಸುವರ್ಣ, ಸದಾನಂದ ಬಳ್ಕೂರು, ರಾಮಚಂದ್ರ ಬೈಕಂಪಾಡಿ, ಕಿರಣ್‌ ಕುಮಾರ್‌, ಗಣಪತಿ ಉಳ್ವೆàಕರ್‌, ನಿತಿನ್‌ ಕುಮಾರ್‌, ಶೋಭೇಂದ್ರ ಸಸಿಹಿತ್ಲು, ನಾಯಕರಾದ ಸಿ.ಟಿ. ರವಿ, ಬಿ.ಎಂ. ಸುಕುಮಾರ ಶೆಟ್ಟಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತೀ ಶೆಟ್ಟಿ, ಉದಯ ಕುಮಾರ್‌   ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.  ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಸ್ವಾಗತಿಸಿ, ಕುತ್ಯಾರು ನವೀನ್‌ ಶೆಟ್ಟಿ, ಕುತ್ಯಾರು ಪ್ರಸಾದ್‌ ಶೆಟ್ಟಿ, ಕುಯಿಲಾಡಿ ಸುರೇಶ ನಾಯಕ್‌ ಕಾರ್ಯಕ್ರಮ ನಿರ್ವಹಿಸಿದರು.

ಆಗ 6, ಈಗ 19 ರಾಜ್ಯ
ನರೇಂದ್ರ ಮೋದಿಯವರು ಪ್ರಧಾನಿಯಾಗುವಾಗ ಆರು ರಾಜ್ಯಗಳಲ್ಲಿ ಬಿಜೆಪಿ ಸರಕಾರವಿದ್ದರೆ, ಈಗ 19 ರಾಜ್ಯಗಳಲ್ಲಿ ಬಿಜೆಪಿ ಸರಕಾರವಿದೆ.

– ಬಿ.ಎಸ್‌. ಯಡಿಯೂರಪ್ಪ

ಉಜಾಲಾ ಯೋಜನೆ ವಿಸ್ತರಣೆ
ಬಡಕುಟುಂಬಕ್ಕೆ ಗ್ಯಾಸ್‌ ಸಿಲಿಂಡರ್‌ ವಿತರಿಸುವ ಉಜಾಲಾ ಯೋಜನೆ ಯನ್ನು 3.5 ಕೋಟಿ ಕುಟುಂಬದಿಂದ 8. ಕೋಟಿ ಕುಟುಂಬಕ್ಕೆ ವಿಸ್ತರಿ ಸಲು ಬಜೆಟ್‌ನಲ್ಲಿ ಪ್ರಧಾನಿ ಮೋದಿ ಯವರು ಘೋಷಿಸಿದರು. ಇಂತಹ ಯೋಜನೆ ಗಳನ್ನು ರಾಜ್ಯ ಸರಕಾರದ ಸಹಕಾರದಿಂದ ಇನ್ನಷ್ಟು ಪರಿಣಾಮಕಾರಿಯಾಗಿ ಅನು ಷ್ಠಾನಗೊಳಿಸಬಹುದು ಎಂದರು. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯ ಸರಕಾರ ಅತ್ಯಂತ ಭ್ರಷ್ಟಾಚಾರದಿಂದ ಕೂಡಿದ್ದು ಯಾವುದೇ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದು ಶಾ ಹೇಳಿದರು.

ಕಾಂಗ್ರೆಸ್‌ ಸರಕಾರ ಆರು ದಶಕಗಳಿಂದ ಆಡಳಿತ ನಡೆಸುತ್ತಿದ್ದು ಈಗಿನ ಎಲ್ಲ ಅಧ್ವಾನಗಳಿಗೆ ಉತ್ತರಿಸುವ ಹೊಣೆ ಹೊರಬೇಕಾಗಿದೆ. ಪ್ರತಿಯೊಂದು ವಿಷಯ ವನ್ನು ಚುನಾವಣೆ ಮತ್ತು ಲಾಭದ ದೃಷ್ಟಿಯಿಂದ ಕಾಂಗ್ರೆಸ್‌ ನೋಡು ತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದರು.

No Comments

Leave A Comment