Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ಫೈರ್ ಸ್ಟಾರ್ ಡೈಮಂಡ್ ನ ಅಧ್ಯಕ್ಷ ವಿಫುಲ್ ಅಂಬಾನಿ ಬಂಧನ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈರ್ ಸ್ಟಾರ್ ಡೈಮಂಡ್ಸ್ ಅಧ್ಯಕ್ಷ ವಿಫುಲ್ ಅಂಬಾನಿಯನ್ನು ಸಿಬಿಐ ಬಂಧಿಸಿದ್ದು ಈ ಪ್ರಕರಣದ ಮೊದಲ ಹೈಪ್ರೊಫೈಲ್ ಬಂಧನ ಇದಾಗಿದೆ.

ವಿಫುಲ್ ಅಂಬಾನಿ ಅಂಬಾನಿ ಸಹೋದರರ ಸಂಬಂಧಿಯಾಗಿದ್ದು, ಈ ಪ್ರಕರಣದಲ್ಲಿ ವಿಫುಲ್ ಅಂಬಾನಿಯನ್ನು ಬಂಧಿಸಿರುವುದಕ್ಕೂ ಅಂಬಾನಿ ಸಹೋದರರು ಅಥವಾ ಅವರ ಸಂಸ್ಥೆಗಳು ಶಾಮೀಲಾಗಿರುವುದರ ಬಗ್ಗೆ ಸಿಬಿಐ ಈ ವರೆಗೂ ಮಾಹಿತಿ ನೀಡಿಲ್ಲ.

ವಿಫುಲ್ ಅಂಬಾನಿಯೊಂದಿಗೆ ಇನ್ನೂ 4 ಹಿರಿಯ ಅಧಿಕಾರಿಗಳನ್ನು ಬಂಧಿಸಲಾಗಿದ್ದು, ಫೈರ್ ಸ್ಟಾರ್ ಡೈಮಂಡ್ ನ ಹಿರಿಯ ಕಾರ್ಯನಿರ್ವಹಕರಾಗಿರುವ ಕವಿತಾ ಮಾಣಿಕ್ಕರ್, ಅರ್ಜುನ್ ಪಾಟೀಲ್ ನ್ನೂ ಬಂಧಿಸಲಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚನೆ ನಡೆದಿರುವ ಪ್ರಕರಣದಲ್ಲಿ ಎಲ್ಒಯು ಗಳನ್ನು ನೀಡಿರುವ ಅಪರಾಧಕ್ಕೆ ಸಂಬಂಧಿಸಿದಂತೆ ಸೋಲಾರ್ ಎಕ್ಸ್ಪೋರ್ಟ್ಸ್, ಡೈಮಂಡ್ ಆರ್ ಯುಎಸ್, ಸ್ಟೆಲ್ಲರ್ ಡೈಮಂಡ್ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಯಲ್ಲಿದ್ದ ಮಾಣಿಕ್ಕರ್ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.

No Comments

Leave A Comment