Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಪ್ರೀತಿಸಲಿಲ್ಲವೆಂದು ಸುಳ್ಯದಲ್ಲಿ ವಿದ್ಯಾರ್ಥಿನಿ ಕೊಲೆ

ಮಂಗಳೂರು: ದಕ್ಷಿಣ ಕನ್ನಡ‌ ಜಿಲ್ಲೆಯ ಸುಳ್ಯದಲ್ಲಿ ಪದವಿ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಸಹಪಾಠಿಯೇ ಪ್ರೀತಿಸಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ.

ಸುಳ್ಯ ಎನ್‌ಎಂಸಿ ಕಾಲೇಜಿನ ದ್ವಿತೀಯ ಬಿಎಸ್ಸಿ ಪದವಿ ವಿದ್ಯಾರ್ಥಿನಿ ಅಕ್ಷತಾ ಕೊಲೆಯಾದವರು. ಇದೇ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ, ನೆಲ್ಲೂರು ಕೆಮ್ರಾಜೆ ನಿವಾಸಿ ಚಂದ್ರಶೇಖರ್ ಎಂಬವರ ಪುತ್ರ ಕಾರ್ತಿಕ್ ಕೊಲೆ ಆರೋಪಿಯಾಗಿದ್ದಾನೆ.

ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದ ಶಾಂತಿ ನಗರ ನಿವಾಸಿಯಾಗಿದ್ದ ಅಕ್ಷತಾ ಸಂಜೆ ಕಾಲೇಜಿನಿಂದ ಬರುತ್ತಿದ್ದಾಗ ಸಂಜೆ 4.30ಕ್ಕೆ ರೋಟರಿ ಶಾಲೆಯ ಬಳಿ ಆರೋಪಿ ಕಾರ್ತಿಕ್ ಈ ಕೃತ್ಯ ಎಸಗಿದ್ದಾನೆನ್ನಲಾಗಿದೆ. ಅಕ್ಷತಾಳಿಗೆ ಏಳು ಬಾರಿ ಚೂರಿಯಿಂದ ಇರಿದ ಆರೋಪಿ ತಾನು ಕೂಡಾ ಕೈಯನ್ನು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

No Comments

Leave A Comment