Log In
BREAKING NEWS >
BJP ಅಂತಿಮ ಪಟ್ಟಿ ಪ್ರಕಟ, 4 ಕ್ಷೇತ್ರ ನಿಗೂಢ; ಶೋಭಾಗೂ ಟಿಕೆಟ್ ಇಲ್ಲ....ನೋಯ್ಡಾ : ಮಹಾ ಪಾತಕಿ ಬಾಲರಾಜ್‌ ಭಾಟಿ ಎನ್‌ಕೌಂಟರ್‌ಗೆ ಬಲಿ...

ಕರ್ನಾಟಕ ಮೂರು ಮಾಫಿಯಾದಿಂದ ಮುಕ್ತವಾಗಬೇಕು: ಅಮಿತ್‌ ಶಾ

ಮಂಗಳೂರು: ರಾಜ್ಯದಲ್ಲಿ ಗೂಂಡಾ ಸರಕಾರ ಆಳ್ವಿಕೆಯಲ್ಲಿದೆ. ಈ ಗೂಂಡಾ ಸರ್ಕಾರ ಅಂತ್ಯವಾಗಬೇಕಿದೆ. ಸಿಎಂ ಹಾಗೂ ಈ ಸರಕಾರವನ್ನು ಕಿತ್ತೊಗೆಯಲು ರಾಜ್ಯದ ಜನ ವಿಧಾನಸಭಾ ಚುನಾವಣೆಗಾಗಿ ಕಾಯುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಗಳವಾರ ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಮೂರು ದಿನಗಳ ರಾಜ್ಯ ಪ್ರವಾಸದಲ್ಲಿರುವ ಶಾ ಅವರು ಸುರತ್ಕಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಕರ್ನಾಟಕ ಮೂರು ಮಾಫಿಯಾಗಳಿಂದ ಮುಕ್ತಿಗೊಳ್ಳಬೇಕಿದೆ. ಮರ್ಡರ್, ಮಾಫಿಯಾ ಹಾಗೂ ಭ್ರಷ್ಟ ಸಚಿವರಿಂದ ಕರ್ನಾಟಕ ಮುಕ್ತಿಗೊಳ್ಳಬೇಕಿದೆ ಎಂದು ಹೇಳಿದ ಶಾ, ಮುಂದಿನ ಚುನಾವಣೆಯಲ್ಲಿ ಜನ ಬಿಜೆಪಿಯನ್ನು ಅಧಿಕಾರಕ್ಕೆ ಏರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಷ್ಟೊಂದು ದುಬಾರಿ ಬೆಲೆಯ ವಾಚ್ ಅನ್ನು ಕಟ್ಟುವ ಮುಖ್ಯಮಂತ್ರಿ ದೇಶದ ಯಾವ ರಾಜ್ಯದಲ್ಲೂ ಇಲ್ಲ ಎಂದು ತಿರುಗೇಟು ನೀಡಿದರು.

No Comments

Leave A Comment