Log In
BREAKING NEWS >
ಕರಾವಳಿಯಲ್ಲಿ ಭಾರೀ ಮಳೆ-ಹಲವೆಡೆಯಲ್ಲಿ ನೆರೆ...ಜೂನ್ 22ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಅನುಗ್ರಹ ಲಕ್ಷ್ಮೀವೃತ ಕಾರ್ಯಕ್ರಮವು ಜರಗಲಿದೆ....

ನಾನು ಕತ್ರೀನಾ, ದೀಪಿಕಾರೊಡನೆ ನಟಿಸಲು ಸದಾ ಸಿದ್ದ, ನಟಿಯರಿಗೆ ಜಾಬ್ ಅಪ್ಲಿಕೇಷನ್ ಕಳಿಸಿದ ಬಿಗ್ ಬಿ ಅಮಿತಾಬ್ ಬಚ್ಚನ್

ಮುಂಬೈ: ಬಾಲಿವುಡ್ ಬಿಗ್ ಬಿ  ಅಮಿತಾಬ್ ಬಚ್ಚನ್ ಗೆ ಕತ್ರೀನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ ಜತೆ ನಟಿಸುವ ಬಯಕೆಯಾಗಿದೆ. ಇದಕ್ಕಾಗಿ ಆವರು ತಮ್ಮ ಟ್ವಿಟ್ಟ್ರ ನಲ್ಲಿ ಆನ್ ಲೈನ್ ಜಾಬ್ ಅಪ್ಲಿಕೇಷನ್ ಸಲ್ಲಿಸಿದ್ದಾರೆ.

ಆಂಗ್ಲ ಪತ್ರಿಕೆಯೊಂದು ದೀಪಿಕಾ ಹಾಗೂ ಕತ್ರೀನಾ ಅವರುಗಳು ಶಾಹಿದ್ ಕಪೂರ್ ಮತ್ತು ಅಮಿರ್ ಖಾನ್‍ಗಿಂತ ಎತ್ತರವಾಗಿದ್ದಾರೆ, ಹೀಗಾಗಿ ಚಿತ್ರೀಕರಣದ ವೇಳೆ ನಿರ್ದೇಶಕರು ಈ ನಟಿಯರ ಎತ್ತರವನ್ನು ಮರೆ ಮಾಚಲು ಸಾಹಸ ಪಡಬೇಕಾಗುತ್ತದೆ ಎಂದು ಸುದ್ದಿ ಪ್ರಕಟಿಸಿತ್ತು. ಬಿಗ್ ಬಿ ಅಮಿತಾಬ್ ತಾವು ಆ ಪತ್ರಿಕೆಯ ತುಣುಕನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದಲ್ಲದೆ “ನಾನು ಕತ್ರೀನಾ ಹಾಘೂ ದೀಪಿಕಾಗಿಂತ ಎತ್ತರವಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಇಷ್ಟೇ ಅಲ್ಲದೆ ಬಿಗ್ ಬಿ ಅಮಿತಾಬ್ ಹೆಸರು, ವಯಸ್ಸು, ಕೆಲಸದ ಅನುಭವ, ಭಾಷೆ ಹೀಗೆ ನಾನಾ ವಿವರಗಳನ್ನು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದು ಕಡೆಯಲ್ಲಿ ‘ನಾನು ನಿಮಗಿಂತ ಎತ್ತರವಿದ್ದು ನಿಮ್ಮೊಡನೆ ನಟಿಸಲು ಸದಾ ಸಿದ್ದನಿದ್ದೇನೆ’ ಎಂದಿದ್ದಾರೆ.

No Comments

Leave A Comment