Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಬೆಂಕಿ ಅವಘಡ: ಪಶ್ಚಿಮ ಬಂಗಾಲದ ಕಾಳಿ ದೇವಸ್ಥಾನ ಸುಟ್ಟು ಭಸ್ಮ

ಜಲಪಾಯ್‌ಗಾಡಿ, ಪಶ್ಚಿಮ ಬಂಗಾಲ : ಇಲ್ಲಿನ ಸಿಕಾರ್‌ಪುರದಲ್ಲಿನ ಪ್ರಸಿದ್ಧ ಭವಾನಿ ಪಾಠಕ್‌ ಕಾಳಿ ದೇವಸ್ಥಾನದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ ಪರಿಣಾವಾಗಿ ಇಡಿಯ ದೇವಸ್ಥಾನ ಸುಟ್ಟು ಭಸ್ಮವಾಗಿರುವುದಾಗಿ ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಭವಾನಿ ಪಾಠಕ್‌ ಕಾಳಿ ದೇವಸ್ಥಾನ ಸುಮಾರು 300 ವರ್ಷಗಳಷ್ಟು ಹಳೆಯದು. ನಿನ್ನೆ ತಡರಾತ್ರಿ ದೇವಳದಲ್ಲಿ ಬೆಂಕಿ ಅವಘಡ ಸಂಭವಿಸಿತು. ಸ್ಥಳೀಯರು ಬೆಂಕಿ ನಂದಿಸುವ ಯತ್ನ ನಡೆಸಿದರು. ಆದರೆ ಸಫ‌ಲರಾಗಲಿಲ್ಲ.

ಸುದ್ದಿ ತಿಳಿದು ಧಾವಿಸಿ ಬಂದ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಈ ದುರ್ಘ‌ಟನೆಯಲ್ಲಿ ಯಾವುದೇ ಜೀವ ಹಾನಿ ಆಗಿಲ್ಲ; ಆದರೆ ದೇವಳಕ್ಕಾಗಿರುವ ನಷ್ಟದ ಅಂದಾಜು ಇನ್ನಷ್ಟೇ ಗೊತ್ತಾಗಬೇಕಾಗಿದೆ.

No Comments

Leave A Comment