Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯಿಂದ ಮತ್ತೊಂದು ವಿಶಿಷ್ಟ ದಾಖಲೆ!

ಸೆಂಚುರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ರನ್ ಗಳ ಪ್ರವಾಹವನ್ನೇ ಹರಿಸಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಫ್ರಿಕಾ ನೆಲದಲ್ಲಿ ಮತ್ತೊಂದು ವಿನೂತನ ದಾಖಲೆ ನಿರ್ಮಾಣ ಮಾಡಿದ್ದಾರೆ.

ಕೊಹ್ಲಿ ಏಕದಿನ ಕ್ರಿಕೆಟ್​ ನಲ್ಲಿ ದ್ವಿಪಕ್ಷೀಯ ಸರಣಿಯೊಂದರಲ್ಲಿ 500ಕ್ಕೂ ಹೆಚ್ಚು ರನ್​ ಗಳಿಸಿದ ಮೊದಲ ಬ್ಯಾಟ್ಸ್​ಮನ್​ ಮತ್ತು ನಾಯಕ ಎಂಬ ಗೌರವಕ್ಕೆ ಕೊಹ್ಲಿ ಪಾತ್ರರಾಗಿದ್ದು, ಇದೊಂದು ಹೊಸ ಮೈಲುಗಲ್ಲಾಗಿದೆ. ದಕ್ಷಿಣ ಆಫ್ರಿಕಾ  ವಿರುದ್ಧದ 6 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭರ್ಜರಿಯಾಗಿ ಬ್ಯಾಟ್​ ಬೀಸಿದ ಕೊಹ್ಲಿ 3 ಶತಕ ಮತ್ತು 1 ಅರ್ಧ ಶತಕ ಸಹಿತ 558 ರನ್​ ಕಲೆ ಹಾಕಿದ್ದು, ಈ ಮೂಲಕ ಏಕದಿನ ಸರಣಿಯೊಂದರಲ್ಲಿ ವಿಶ್ವದ ಯಾವುದೇ  ಬ್ಯಾಟ್ಸಮನ್ ಕಲೆಹಾಕದ ಅತ್ಯಧಿಕ ರನ್ ಗಳಿಸಿದ ವಿಶ್ವದಾಖಲೆ ಬರೆದಿದ್ದಾರೆ.

ಇದಕ್ಕೂ ಮೊದಲು ರೋಹಿತ್ ಶರ್ಮ 2013ರಲ್ಲಿ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ 6 ಇನಿಂಗ್ಸ್​ಗಳಲ್ಲಿ 491 ರನ್ ದಾಖಲಿಸಿದ್ದು ಹಿಂದಿನ ದಾಖಲೆಯಾಗಿತ್ತು. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾದಲ್ಲಿ  2005ರಲ್ಲಿ ಇಂಗ್ಲೆಂಡ್ ಬ್ಯಾಟ್ಸ್​ಮನ್ ಕೆವಿನ್ ಪೀಟರ್​ಸೆನ್ 6 ಪಂದ್ಯಗಳಲ್ಲಿ 3 ಶತಕ ಸಹಿತ 454 ರನ್ ಸಿಡಿಸಿ ದಾಖಲೆ ಬರೆದಿದ್ದರು. ಇದೀಗ ಕೊಹ್ಲಿ ಪೀಟರ್​ಸೆನ್​ ಮತ್ತು ರೋಹಿತ್ ಶರ್ಮಾ ದಾಖಲೆಯನ್ನೂ ಮುರಿದಿದ್ದಾರೆ.

No Comments

Leave A Comment