“ಜಾದೂ ಬರಿಯ ವಿಸ್ಮಯವಲ್ಲ ವಿಜ್ಞಾನದ ಕಲಾತ್ಮಕ ಪ್ರದರ್ಶನ-ಭಾಷೆ, ಕಲಾ ಮಾಧ್ಯಮದ ಮೂಲಕ ಉತ್ತಮ ಸಂವಹನ ಸಾಧ್ಯ”- ಜೂನಿಯರ್ ಶಂಕರ್ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡಕ ಇಲ್ಲಿನ ಕಲಾ ಸಂಘ ಮತ್ತು ಭಾಷಾಸಂಘದ ಉದ್ಘಾಟನೆ ಹಾಗೂ ಅಕ್ಷಯ ವಸಂತ ಜಾಗೃತಿ ಮಾಹಿತಿ ಕಾರ್ಯಕ್ರಮವು ಕಾಲೇಜಿನ ಕಲಾಸಂಘ ಭಾಷಾಸಂಘ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಭಾಗಿತ್ವದಲ್ಲಿ ನೆರವೇರಿತು. ಅಂತರ್ರಾಷ್ಟೀಯ ಖ್ಯಾತಿಯ ಜಾದೂಗಾರರಾದ ಉಡುಪಿಯ ಜೂನಿಯರ್ ಶಂಕರ್ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಜಾದುವನ್ನು ಕೇವಲ ಮನೋರಂಜನೆಗಷ್ಟೇ ಸೀಮಿತಗೊಳಿಸದೆ ದುಷ್ಚಟಗಳ ದುಷ್ಪರಿಣಾಮಗಳನ್ನು ಪರಿಣಾಮಕಾರಿಯಾಗಿ ದೂರ ಮಾಡುವಂತಹ ಜಾಗೃತಿ ಮೂಡಿಸಲು ಸಾಧ್ಯ ಎಂದು ತಿಳಿಸುತ್ತಾ ಜಾಗೃತಿ ಕಾರ್ಯವನ್ನು ನಡೆಸಿಕೊಂಡು ಬರುತ್ತಿರುವ ಬಗ್ಗೆ ಮಾಹಿತಿ ನೀಡಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜೆ.ಆರ್. ರಾಯ್ಕರ್ ಅಧ್ಯಕ್ಷತೆ ವಹಿಸಿದ್ದರು. ಅಂತಿಮ ಬಿ.ಎ. ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಪ್ರೊ. ಸುಭಾಷ್ ಸ್ವಾಗತಿಸಿದರು. ಡಾ. ನಿಕೇತನರವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೊ. ಸುಜಯ ಕೆ.ಎಸ್. ಉದ್ಘಾಟಕರನ್ನು ಪರಿಚಯಿಸಿದರು. ಪ್ರೊ. ಪ್ರವೀಣ್ ಶೆಟ್ಟಿ ವಂದಿಸಿದರು. ಪ್ರೊ. ಸುಮನಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದನಂತರ ಜೂನಿಯರ್ ಶಂಕರ್ ಹಾಗೂ ಮೈಥಿಲಿ ತೇಜಸ್ವಿ ಜೊತೆಯಾಗಿ ಅಕ್ಷಯ ವಸಂಗ ಜಾಗೃತಿ ಮಾಹಿತಿ ಕಾರ್ಯಕ್ರಮದ ಇಂದ್ರಜಾಲಿಕ ಜಾದೂ ಚಮತ್ಕಾರವನ್ನು ಪ್ರದರ್ಶಿಸಿದರು.