Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಬೆಂಗಳೂರು: ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ತಾಯಿ ಆತ್ಮಹತ್ಯೆ

ಬೆಂಗಳೂರು: ತನ್ನ ಇಬ್ಬರು ಮಕ್ಕಳಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ತಾಯಿಯೊಬ್ಬಳು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಜಯನಗರದ ಮಾರತ್ ಹಳ್ಳಿಯಲ್ಲಿ ನಡೆದಿದೆ.

26 ವರ್ಷದ ರಾಮಲಮ್ಮ ತನ್ನ 4 ವರ್ಷದ ಬಸವಂತ್ ಹಾಗೂ 2 ವರ್ಷದ ಹಸಿನಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ರಾಮಲಮ್ಮ ಮಾಗೇಂದ್ರ ಎಂಬ ದಿನಗೂಲಿ ನೌಕರನ್ನು ವಿವಾಹವಾಗಿದ್ದು, ದಂಪತಿ ತಮಿಳುನಾಡು ಮೂಲದವರಾಗಿದ್ದಾರೆ. ಇಂದು ಬೆಳಗ್ಗೆ ಮಾಗೇಂದ್ರ ಎಂದಿನಂತೆ ಕೆಲಸಕ್ಕೆ ತೆರಳಿದ ನಂತರ ಸುಮಾರು 8.30ರ ಸುಮಾರಿಗೆ ಮಕ್ಕಳಿಗೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಿರುಚಾಟ ಕೇಳಿದ ಅಕ್ಕಪಕ್ಕದ ಮನೆಯವರು ರಕ್ಷಿಸಲು ಪ್ರಯತ್ನಿಸಿದ್ದಾರೆ, ಆದರೆ ಒಳಗಿನಿಂದ ಲಾಕ್ ಮಾಡಿದ್ದ ಕಾರಣ ಯಾವುದೇ ಪ್ರಯೋಜನವಾಗಲಿಲ್ಲ, ಮಾನಸಿಕ ರೋಗದಿಂದ ನರಳುತ್ತಿದ್ದ ರಾಮಲಮ್ಮ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು, ಕೇವಲ 4 ದಿನಗಳ ಹಿಂದೆಯಷ್ಚೇ ಆಕೆ ತಮಿಳು ನಾಡಿನಿಂದ ವಾಪಸ್ ಬಂದಿದ್ದಳು ಆಕೆಯ ಪತಿ ತಿಳಿಸಿದ್ದಾನೆ, ಎಚ್ ಎಎಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶವಗಳನ್ನು ಬೌರಿಂಗ್ ಆಸ್ಪತ್ರೆಗ ಸಾಗಿಸಿದ್ದಾರೆ.

No Comments

Leave A Comment