Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಫ್ಲೋರಿಡಾದಲ್ಲಿ ವಿದ್ಯಾರ್ಥಿಯಿಂದ ಶೂಟೌಟ್: 17 ಸಾವು. ಹಲವರಿಗೆ ಗಾಯ

ಫ್ಲೋರಿಡಾ: ಅಮೆರಿಕದ ಶಾಲೆಯೊಂದರಲ್ಲಿ ವಿದ್ಯಾರ್ಥಿಯೋರ್ವ ಶೂಟೌಟ್ ಮಾಡಿದ್ದು, ಘಟನೆಯಲ್ಲಿ 17 ಮಂದಿ ಸಾವಿಗೀಡಾಗಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಫ್ಲೋರಿಡಾದ ಪಾರ್ಕ್ ಲ್ಯಾಂಡ್ ನಲ್ಲಿರುವ ಡಗ್ಲಾಸ್ ಹೈಸ್ಕೂಲ್ ನಲ್ಲಿ ಈ ಘಟನೆ ನಡೆದಿದ್ದು, ಶೂಟೌಟ್ ನಡೆಸಿದ ವಿದ್ಯಾರ್ಥಿಯನ್ನು 19 ವರ್ಷದ ನಿಕೋಲಸ್ ಕ್ರೂಸ್ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ ನಿಕೋಲಸ್ ಕ್ರೂಸ್  ನನ್ನು ಈ ಹಿಂದೆ ಶಾಲಾ ಆಡಳಿತ ಮಂಡಳಿ ಅಮಾನತು ಮಾಡಿತ್ತು. ಶಾಲೆಯಲ್ಲಿ ಅಶಿಸ್ತು ತೋರಿದ್ದರಿಂದ ಆತನ ವಿರುದ್ಧ ಶಾಲಾ ಆಡಳಿತ ಮಂಡಳಿ ಕಠಿಣ ಕ್ರಮಕೈಗೊಂಡಿತ್ತು.

ಇದೇ ಆಕ್ರೋಶದಲ್ಲಿ ನಿಕೋಲಸ್ ಕ್ರೂಸ್ ಶಾಲೆ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಸ್ಥಳದಲ್ಲೇ ಸುಮಾರು 17 ಮಂದಿ ಸಾವಿಗೀಡಾಗಿದ್ದಾರೆ. ಈ ಪೈಕಿ ಶಾಲಾ ಸಿಬ್ಬಂದಿಗಳು ಮತ್ತು ಶಾಲಾ ಮಕ್ಕಳು ಇದ್ದರು ಎನ್ನಲಾಗಿದೆ.  ಇನ್ನು ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಮಿಯಾಮಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಪ್ರಸ್ತುತ ಶೂಟೌಟ್ ನಡೆಸಿದ ವಿದ್ಯಾರ್ಥಿಯನ್ನು ಫ್ಲೋರಿಡಾ ಪೊಲೀಸರು ಬಂಧಿಸಿದ್ದು, ಆತನನ್ನು  ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ.

No Comments

Leave A Comment