Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಭ್ರಷ್ಟಾಚಾರ ಪ್ರಕರಣ: ಬಾಂಗ್ಲಾದೇಶ ಮಾಜಿ ಪ್ರಧಾನಿ ಖಲೀದಾ ಜಿಯಾ ಗೆ 5 ವರ್ಷ ಜೈಲು

ಡಾಕಾ: ಬಾಂಗ್ಲಾದೇಶದ ನ್ಯಾಯಾಲಯ ಗುರುವಾರ ವಿಪಕ್ಷ ನಾಯಕಿ ಎರಡು ಬಾರಿ ಪ್ರಧಾನಿಯಾಗಿದ್ದ ಖಲೆದಾ ಜಿಯಾ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅನಾಥಾಶ್ರಮ ಹಣವನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣ ಸಂಬಂಧ ಈ ಶಿಕ್ಷೆ ಪ್ರಕಟವಾಗಿದೆ.
ಬಾಂಗ್ಲಾದೇಶ ನಾಷನಲಿಸ್ಟ್ ಪಕ್ಷದ ನಾಯಕಿ, ಪ್ರತಿಪಕ್ಷ ಮುಖಂಡರಾದ ಜಿಯಾ, ಅನಾಥಾಶ್ರಮಕ್ಕಾಗಿ ರಚನೆಯಾದ ಟ್ರಸ್ಟ್  ನಿಂದ 252,000 ಡಾಲರ್ ಹಣವನ್ನು ಪಡೆದು ದುರುಪಯೋಗಪಡಿಸಿಕೊಂಡಿದ್ದರು.
“ಆಕೆಯ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಮತ್ತು ಅವರ ಸಾಮಾಜಿಕ ಮತ್ತು ದೈಹಿಕ ಸ್ಥಿತಿಯನ್ನು ಪರಿಗಣಿಸಲು ನ್ಯಾಯಾಲಯವು ಸಮರ್ಥವಾಗಿದೆ. ದಂಡ ಸಂಹಿತೆಯ ವಿಭಾಗಗಳಾದ 409 ಮತ್ತು 109ರ ಅನುಸಾರ ಜಿಯಾ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ” ನ್ಯಾಯಾಧೀಶರಾದ ಮೊಹಮ್ಮದ್  ಅಖ್ತರುಝಾಮನ್ ಹೇಳಿದ್ದಾರೆ.
ಜಿಯಾ ಅವರ ಪುತ್ರ ತರೀಕ್ ರೆಹಮಾನ್, ಈ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದು, ಅವರ ನಾಲ್ಕು ಸಹಾಯಕರು 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
No Comments

Leave A Comment