Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಬೆಂಗಳೂರು: ಕಾಲೇಜು ಚುನಾವಣೆಯಲ್ಲಿ ಸೋತದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ, ಪೋಷಕರಿಂದ ಮಗಳ ನೇತ್ರ ದಾನ

ಬೆಂಗಳೂರು: ಕಾಲೇಜಿನಲ್ಲಿ ನಡೆದ ಸ್ಟೂಡೆಂಟ್ ಎಲೆಕ್ಷನ್ ನಲ್ಲಿ ಸೋತ ಕಾರಣಕ್ಕೆ ಮನನೊಂದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.
ಕುಮಾರಸ್ವಾಮಿ ಲೇಔಟ್‍ನ ದಯಾನಂದಸಾಗರ ಕಾಲೇಜಿನಲ್ಲಿ 2ನೇ ಸೆಮಿಸ್ಟರ್ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ  ಮೇಘನಾ(18) ಆತ್ಮಹತ್ಯೆಗೆ ಶರಣಾದ ದುರ್ದೈವಿಯಾಗಿದ್ದು ಸ್ಟೂಡೆಂಟ್ ಎಲೆಕ್ಷನ್ ನಲ್ಲಿ ಪಾಲ್ಗೊಂಡು ಸೋತಿದ್ದಳು. ಆಗ ವಿಜೇತ ಪಕ್ಷದವರು ಹಂಗಿಸಿದ್ದ ಕಾರಣ ಬೇಸರಗೊಂಡ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮೃತಳ ತಂದೆ ಚಂದ್ರಶೇಖರ್ ಅಂಧರಾಗಿದ್ದು, ಅವರ ಪತ್ನಿ ಲತಾ ಪತಿಯನ್ನು ಕೆಲಸದ ಸ್ಥಳಕ್ಕೆ ಬಿಟ್ಟು ಬರಲು ಹೋಗಿದ್ದ ವೇಳೆ ಮೇಘನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾಲೇಜು ಎಲೆಕ್ಷನ್ ನಲ್ಲಿ ಸೋತಿದ್ದ ಮೇಘನಾಗೆ ಬೇರೆ ವಿದ್ಯಾರ್ಥಿಗಳು ರ‍್ಯಾಗ್ ಮಾಡುತ್ತಿದ್ದರೆಂದು ಪೋಷಕರು ದೂರಿದ್ದಾರೆ.
ನೇತ್ರ ದಾನ
ಘಟನೆ ಸಂಬಂಧ ರಾಜರಾಜೇಶ್ವರಿ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ವೇಳೆ ಆತ್ಮಹತ್ಯೆ ಮಾಡಿಕೊಂಡ ಮಗಳ ಕಣ್ಣುಗಳನ್ನು ಆಕೆಯ ಪೋಷಕರು ದಾನ ನೀಡಿದ್ದು ನೋವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.
No Comments

Leave A Comment