Log In
BREAKING NEWS >
ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ತೈವಾನ್‌ ಭೂಕಂಪ: 4 ಸಾವು, 255 ಮಂದಿಗೆ ಗಾಯ, ವ್ಯಾಪಕ ನಾಶ

ತೈಪೇ : ತೈವಾನ್‌ ಪೂರ್ವ ಕರಾವಳಿ ಸಮೀಪ 6.4 ಅಂಕಗಳ ತೀವ್ರತೆಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪಕ್ಕೆ ನಾಲ್ವರು ಬಲಿಯಾಗಿದ್ದಾರೆ. ಅನೇಕ ಕಟ್ಟಡಗಳು ವಾಲಿಕೊಂಡಿವೆ ಇಲ್ಲವೇ ಹಾನಿಗೀಡಾಗಿವೆ; 140ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ.

ನಿನ್ನೆ ಮಂಗಳವಾರ ತಡ ರಾತ್ರಿ ಸಂಭವಿಸಿದ್ದ ಈ ಭೂಕಂಪಕ್ಕೆ ಹುವಾಲಿನ್‌ ಗ್ರಾಮ ತೀವ್ರವಾಗಿ ತತ್ತರಿಸಿದೆ. ಇಲ್ಲಿನ ನಾಲ್ಕು ಕಟ್ಟಡಗಳು ನಿಂತಲ್ಲೇ ಸಮಾಧಿಯಾಗುವ ಸ್ಥಿತಿಯನ್ನು ತಲುಪಿವೆ. ವಿಡಿಯೋ ಚಿತ್ರಿಕೆಯಲ್ಲಿ ಕಂಡು ಬರುವಂತೆ ಹಲವಾರು ಮಧ್ಯಮ ಗಾತ್ರದ ಕಟ್ಟಡಗಳು ವಿವಿಧ ಕೋನಗಳಲ್ಲಿ ತೀವ್ರವಾಗಿ ವಾಲಿಕೊಂಡಿವೆ.

ಕುಸಿದು ಬಿದ್ದ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿಕೊಂಡವರನ್ನು ಮೇಲಕ್ಕೆತ್ತುವ ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.

ಈ ಭೂಕಂಪದಿಂದ ಸುಮಾರು 255 ಮಂದಿ ಗಾಯಾಳುಗಳಾಗಿದ್ದಾರೆ; ಎರಡು ಡಜನ್‌ಗೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತೈವಾನ್‌ನ ಸೆಂಟ್ರಲ್‌ ನ್ಯೂಸ್‌ ಏಜನ್ಸಿ ವರದಿ ಮಾಡಿದೆ.

No Comments

Leave A Comment