Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

12 ದಿನಗಳ ಒತ್ತೆಸೆರೆ: ದಿಲ್ಲಿ ಪೊಲೀಸರಿಂದ 5ರ ಬಾಲಕ ಪಾರು

ಹೊಸದಿಲ್ಲಿ : ಕಳೆದ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಶಾಲಾ ಬಸ್ಸಿನಿಂದ ಅಪಹರಿಸಲ್ಪಟ್ಟಿದ್ದ ಐದರ ಹರೆಯದ ಬಾಲಕನನ್ನು ಅಪಹರಣಕಾರರ ವಶದಿಂದ ಜೀವ ಸಹಿತ ಪಾರು ಮಾಡುವಲ್ಲಿ ದಿಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಾಲಕನ ಬಂಧ ಮುಕ್ತಿ ಕಾರ್ಯಾಚರಣೆಯ ವೇಳೆ ದಿಲ್ಲಿ ಪೊಲೀಸರು ಶೂಟೌಟ್‌ ನಡೆಸಿದಾಗ ಒಬ್ಬ ಅಪಹರಣಕಾರ ಮೃತಪಟ್ಟು ಇನ್ನೊಬ್ಟಾತ ಗಾಯಗೊಂಡ ಎಂದು ವರದಿಗಳು ತಿಳಿಸಿವೆ. ಗಾಯಾಳು ಅಪಹರಣಕಾರನನ್ನು ಪೊಲೀಸರು ದಿಲ್ಲಿಯ ಜಿಟಿಬಿ ಆಸ್ಪತ್ರೆಗೆ ಸೇರಿಸದ್ದಾರೆ.

ಜನವರಿ 25ರಂದು ಬಾಲಕನು ತನ್ನ ಸಹೋದರಿಯೊಂದಿಗೆ ಶಾಲಾ ಬಸ್ಸಿನಲ್ಲಿ ಹೋಗಿದ್ದ. ದಿಲ್ಲಿಯ ದಿಲ್‌ಷದ್‌ ಗಾರ್ಡನ್‌ ಪ್ರದೇಶದಲ್ಲಿ ಬೈಕಿನಲ್ಲಿ ಬಂದಿದ್ದ ಇಬ್ಬರು ದುರುಳರು ಬಾಲಕನನ್ನು ಅಪಹರಿಸಿ ಒಯ್ದರು. ಈ ಸಂದರ್ಭದಲ್ಲಿ ಅಪಹರಣಕಾರರು ನಡೆಸಿದ್ದ ಗುಂಡೆಸೆತದಲ್ಲಿ ಶಾಲಾ ಬಸ್ಸಿನ ಡ್ರೈವರ್‌ ಗಾಯಗೊಂಡಿದ್ದ.

ಅದಾಗಿ ಮೂರು ದಿನಗಳ ಬಳಿಕ ಅಪಹರಣಕಾರರರು ಬಾಲಕನ ಹೆತ್ತವರಿಗೆ ಫೋನ್‌ ಮಾಡಿ 60 ಲಕ್ಷ ರೂ. ಒತ್ತೆ ಹಣ ನೀಡುವಂತೆ ಕೇಳಿದ್ದರು.

ಫೋನ್‌ ಕರೆ ವಿವರಗಳನ್ನು ಬಳಸಿಕೊಂಡು ಪೊಲೀಸರು ಸತತ 12 ದಿನಗಳ ಕಾಲ ಶ್ರಮಿಸಿ, ಕಾರ್ಯಾಚರಣೆ ನಡೆಸಿ, ಅಪಹರಣಕಾರರ ಒತ್ತೆಸೆರೆಯಲ್ಲಿದ್ದ ಬಾಲಕನನ್ನು ಬಂಧಮುಕ್ತಗೊಳಿಸುವಲ್ಲಿ ಸಫ‌ಲರಾದರು.

ಅಪಹರಣಕಾರರು ಬಾಲಕನನ್ನು ಸಾಹಿಬಾಬಾದ್‌ ಪ್ರದೇಶದಲ್ಲಿನ ಅಪಾರ್ಟ್‌ ಮೆಂಟರ್‌ ಒಂದರ ಫ್ಲಾಟಿನಲ್ಲಿ ಇರಿಸಿದ್ದರು. ನಿನ್ನೆ ಸೋಮವಾರ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಪೊಲೀಸರು ಈ ಫ್ಲಾಟನ್ನು ಪ್ರವೇಶಿಸಿದರು. ಆಗ ಅಪಹರಣಕಾರರು ಅವರ ಮೇಲೆ ಗುಂಡಿನ ದಾಳಿ ನಡೆಸಿದರು. ಒಡನೆಯೇ ಗುಂಡಿನ ಪ್ರತಿ ದಾಳಿ ನಡಸಿದ ಪೊಲೀಸರ ಗುಂಡಿಗೆ ಒಬ್ಬ ಅಪಹರಣಕಾರ (ರವಿ)  ಹತನಾದ; ಇನ್ನೊಬ್ಬ (ಪಂಕಜ್‌) ಗಾಯಗೊಂಡ.

ಈ ಗುಂಡಿನ ಕಾಳಗದಲ್ಲಿ ಒಬ್ಬ ಪೊಲೀಸ್‌ ಸಿಬಂದಿಗೆ ಬುಲೆಟ್‌ ತಾಗಿತಾದರೂ ಅವರಿಗೆ ಗಾಯವಾಗಲಿಲ್ಲ. ಹಾಗಿದ್ದರೂ ಪೊಲೀಸರು ಬಾಲಕನನ್ನು ಒತ್ತೆಸೆರೆಯಿಂದ ಮುಕ್ತಗೊಳಿಸಿ ಹೆತ್ತವರ ವಶಕ್ಕೆ ಒಪ್ಪಿಸಿದರು.

No Comments

Leave A Comment