Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಥಾಣೆ: ಹದಿಹರೆಯದ ಇಬ್ಬರು ಹುಡುಗಿಯರು ನಾಪತ್ತೆ; ದೂರು

ಥಾಣೆ : ತಮ್ಮ ಉದ್ಯೋಗ ಸ್ಥಳಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿ ಮನೆಯಿಂದ ಹೋಗಿ ನಾಪತ್ತೆಯಾಗಿರುವ ಇಬ್ಬರು ಹದಿ ಹರೆಯದ ಹುಡುಗಿಯರಿಗಾಗಿ ಜಿಲ್ಲಾ ಗ್ರಾಮೀಣ ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

16 ಮತ್ತು 17 ವರ್ಷ ಪ್ರಾಯದ ಈ ಇಬ್ಬರು ಹುಡುಗಿಯರು ಹೇರ್‌ ಕ್ಲಿಪ ಉತ್ಪಾದಿಸುವ ಭಯಾಂದರ್‌ನ ಘಟಕವೊಂದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು.

ಫೆ.3ರಂದು ಈ ಹುಡುಗಿಯರು ತಮ್ಮ ಮನೆಯಲ್ಲಿ ಹೆತ್ತವರಿಗೆ ತಾವು ಟೇಲರ್‌ಅಂಗಡಿಗೆ ಹೋಗಿ ಅಲ್ಲಿಂದ ಉದ್ಯೋಗ ಸ್ಥಳಕ್ಕೆ ಹೋಗುವುದಾಗಿ ಹೇಳಿ ಮನೆ ಬಿಟ್ಟಿದ್ದರು. ಅಂದು ರಾತ್ರಿಯಾದರೂ ಈ ಹುಡುಗಿಯರು ಮನೆಗೆ ಮರಳಿ ಬಂದಿರಲಿಲ್ಲ.

ನಾಪತ್ತೆಯಾಗಿರುವ ಹುಡುಗಿಯರಿಗಾಗಿ ಹುಡುಕಾಟ ನಡೆಸುತ್ತಿರುವ ಪೊಲೀಸರು ಮನೆಯವರು ಕೊಟ್ಟಿರುವ ದೂರಿನ ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

No Comments

Leave A Comment