Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಮೊಬೈಲ್‌ನಲ್ಲಿ ಚಿನ್ನ ಸಾಗಟ: ವಿಮಾನ ನಿಲ್ದಾಣದಲ್ಲಿ ಆರೋಪಿ ಸೆರೆ

ಮಂಗಳೂರು: ದುಬೈಯಿಂದ ಆಗಮಿಸಿದ ಪ್ರಯಾಣಿಕನೊಬ್ಬ ಮೊಬೈಲ್‌ ಒಳಗೆ ಚಿನ್ನದ ಬಿಸ್ಕೆಟ್‌ ಇಟ್ಟು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಸಾಗಿಸಲು ಯತ್ನಿಸಿದ ಪ್ರಕರಣವನ್ನು ಮಂಗಳವಾರ ರಾತ್ರಿ ಪತ್ತೆಹಚ್ಚಿದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ಆತನಿಂದ 39 ಲಕ್ಷ ರೂ. ಮೌಲ್ಯದ 1.282 ಕಿಲೋ ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ.

ಕೇರಳ ಕಾಸರಗೋಡು ನಿವಾಸಿ ಅಹಮ್ಮದ್‌ ನಬೀಲ್‌ ಗಫೂರ್‌ (21) ಬಂಧಿತ ಆರೋಪಿ. ಈತ ಮಂಗಳವಾರ ರಾತ್ರಿ 7 ಗಂಟೆಗೆ ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಸ್ಪೈಸ್‌ ಜೆಟ್‌ ಎಸ್‌ಜಿ-60 ವಿಮಾನದಲ್ಲಿ ಪ್ರಯಾಣಿಸಿದ್ದ. ಆತ ವಿಮಾನದಿಂದ ಇಳಿದು ಬರುತ್ತಿದ್ದಂತೆ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಆತ ಧರಿಸಿದ್ದ ಅಂಗಿಯ ಕಿಸೆಯಲ್ಲಿದ್ದ ಮೊಬೈಲ್‌ ಪರಿಶೀಲನೆ ನಡೆಸಿದಾಗ ಅಧಿಕ ಭಾರ ಇರುವುದು ಗಮನಕ್ಕೆ ಬಂದಿದೆ.

No Comments

Leave A Comment