Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ದೆಹಲಿ: 8 ತಿಂಗಳ ಕಂದನ ಮೇಲೆ 28 ವರ್ಷದ ಸಂಬಂಧಿಯಿಂದಲೇ ಅತ್ಯಾಚಾರ

ನವದೆಹಲಿ: ರಾಜಧಾನಿ ದೆಹಲಿ ಮತ್ತೊಂದು ಭೀಭತ್ಸ ಕೃತ್ಯಕ್ಕೆ ಸಾಕ್ಷಿಯಾಗಿದ್ದು, ಊಹಿಸಲೂ ಸಾಧ್ಯವಿಲ್ಲದ ರೀತಿಯಲ್ಲಿ ಸಂಬಂಧಿಯೋರ್ವ 8 ತಿಂಗಳ ಕಂದನ ಮೇಲೆ ಅತ್ಯಾಚಾರ ವೆಸಗಿರುವ ಘಟನೆ ಬೆಳಕಿಗೆ ಬಂದಿದೆ.

ಮೂಲಗಳ ಪ್ರಕಾರ ವಾಯುವ್ಯ ದೆಹಲಿಯ ನೇತಾಜಿ ಸುಭಾಷ್ ಪ್ರದೇಶದಲ್ಲಿ ಈ ಕೃತ್ಯ ನಡೆದಿದ್ದು, ಆರೋಪಿಯನ್ನು ಕೂಡಲೇ ಪೊಲೀಸರು ವಶಕ್ಕ ಪಡೆದಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಆರೋಪಿ ಕುಡಿದ ಮತ್ತಿನಲ್ಲಿ  ಕೃತ್ಯವೆಸಗಿರುವ ಕುರಿತು ಬಾಯಿ ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಮಗುವಿನ ಪೋಷಕರು, ತಾವು ದಿನಗೂಲಿ ನೌಕರರಾಗಿದ್ದು, ಕೆಲಸ ನಿಮಿತ್ತ ಮಗುವನ್ನು ತಮ್ಮ ಅತ್ತಿಗೆಯ ಬಳಿ ಬಿಟ್ಟು ತೆರಳಿದ್ದರಂತೆ. ಈ ವೇಳೆ ಮನೆಯಲ್ಲಿ  ಯಾರೂ ಇಲ್ಲದ ಸಂದರ್ಭದಲ್ಲಿ ಆಕೆಯ ಪುತ್ರ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.

ರಾತ್ರಿ ಸುಮಾರು 12.30ರಲ್ಲಿ ಕೆಲಸದಿಂದ ಮನೆಗೆ ಬಂದ ಪೋಷಕರು ಮಗುವಿನ ಬಳಿ ತೆರಳಿದ್ದಾಗ ಮಗು ರಕ್ತದ ಮಡುವಿನಲ್ಲಿ ಬಿದ್ದಿತ್ತು. ಗಾಬರಿಗೊಂಡ ಪೋಷಕರು ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಈ ವೇಳೆ  ಅತ್ಯಾಚಾರದ ಕೃತ್ಯ ಬೆಳಕಿಗೆ ಬಂದಿದೆ.  ಪ್ರಸ್ತುತ ಮಗುವಿನ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.

No Comments

Leave A Comment