Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಬೆಂಗಳೂರು: ನಕಲಿ ಹೆಲ್ಮೆಟ್ ವಿರುದ್ಧದ ಕಾರ್ಯಾಚರಣೆಯಿಂದ ಹಿಂದೆ ಸರಿದ ಪೊಲೀಸರು

ಬೆಂಗಳೂರು: ರಾಜ್ಯಾದಾದ್ಯಂತ ತೀವ್ರ ಸುದ್ದಿಗೆ ಮಾಡಿದ್ದ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಭಾರೀ ಆಘಾತವನ್ನು ನೀಡಿದ್ದ ನಕಲಿ ಹೆಲ್ಮೆಟ್ ವಿರುದ್ಧದ ಕಾರ್ಯಾಚರಣೆಯಿಂದ ಪೊಲೀಸ್ ಇಲಾಖೆ ಹಿಂದಕ್ಕೆ ಸರಿದಿದೆ.

ಹೆಲ್ಮೆಡ್ ನೋಡಿದ ಕೂಡಲೇ ನಕಲಿ ಅಥವಾ ಅಸಲಿ ಎಂದು ಹೇಳುವುದು ಅಸಾಧ್ಯ ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಲಿಖಿತ ಪತ್ರ ನೀಡಿರುವ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸುವುದಿಲ್ಲ ಎಂದು ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ಅವರು ಹೇಳಿದ್ದಾರೆ.

ಮೈಸೂರು ನಗರದಲ್ಲಿ ಅಪಘಾತದಿಂದಾಗುವ ಸಾವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೈಸೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ನಕಲಿ ಹೆಲ್ಮೆಟ್ ವಿರುದ್ಧ ಅಲ್ಲಿನ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವಿಚಾರ ಎಲ್ಲೆಡೆ ಹಬ್ಬುತ್ತಿದ್ದಂತೆಯೇ ರಾಜ್ಯ ಗೃಹ ಸಚಿವ ರಾಮಲಿಂಗಾರೆಡ್ಡಿಯವರು ರಾಜ್ಯಾದಾದ್ಯಂತ ನಕಲಿ ಹೆಲ್ಮೆಟ್ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಹೇಳಿದ್ದರು.

ಗೃಹ ಸಚಿವ ಆದೇಶ ಹಿನ್ನಲೆಯಲ್ಲೆ ನಕಲಿ ಹೆಲ್ಮೆಟ್ ಪತ್ತೆ ಮಾಡುವುದು ಪ್ರಾಯೋಗಿಕವಾಗಿ ಅಸಾಧ್ಯವಾಗಿದ್ದ ಕಾರಣ ಯಾವುದೇ ಮಾಪನ ಇಲ್ಲದೇ ನಕಲಿ ಹೆಲ್ಮೆಟ್ ಹೇಗೆ ಪತ್ತೆ ಮಾಡಬೇಕೆಂದು ಕೇಳಿ ನಗರ ಪೊಲೀರು ಡಿ.4 ರಂದು ಬಿಐಎಸ್’ಗೆ ಪತ್ರ ಬರೆದಿದ್ದರು. ಇದಕ್ಕೆ ಲಿಖಿತ ರೂಪದಲ್ಲಿ ಪ್ರತಿಕ್ರಿಯೆ ನೀಡಿರುವ ಬಿಐಎಸ್. ಕೇವಲ ನೋಡಿದ ಕೂಡಲೇ ಹೆಲ್ಮೆಟ್’ನ ಗುಣಮಟ್ಟ ತಿಳಿಯುವುದು ಅಸಾಧ್ಯ.

ಐಎಸ್ಐ ಮುದ್ರೆ ಹೊಂದಿದ್ದ ಕೆಲವು ಕಂಪನಿಗಳಿಗೆ ಮಾತ್ರ ಹೆಲ್ಮೆಟ್ ತಯಾರಿಸಲು ಅನುಮತಿ ನೀಡಲಾಗಿದೆ. ಐಎಸ್ಐ ಮುದ್ರೆ ಹೊಂದಿದ್ದ ಹೆಲ್ಮೆಟ್ ನಲ್ಲಿ ಕಂಪನಿಯ ವಿಳಾಸ, ಮುದ್ರೆ, ತಯಾರಿಸಿದ ದಿನಾಂಕ ಎಲ್ಲವೂ ಇರುತ್ತದೆ. ಹಾಗೆಯೇ ಹೆಲ್ಮೆಟ್ ನಕಲಿ ಅಥವಾ ಅಸಲಿ ಎಂಬುದನ್ನು ಪತ್ತೆ ಹಚ್ಚಬೇಕಾದರೆ ಪ್ರಯೋಗಾಲಯಕ್ಕೆ ಕಳುಹಿಸಿ ಪರಿಶೀಲಿಸಬೇಕಾಗುತ್ತದೆ. ರಸ್ತೆಯಲ್ಲಿ ನಿಂತು ದ್ವಿಚಕ್ರ ವಾಹನ ತಡೆದು ಕಾರ್ಯಾಚರಣೆ ನಡೆಸುವುದು ಅಸಾಧ್ಯ ಎಂದು ಹೇಳಿದೆ. ಈ ಹಿನ್ನಲೆಯಲ್ಲಿ ನಕಲಿ ಹೆಲ್ಮೆಟ್’ಗಳ ವಿರುದ್ದದ ಕಾರ್ಯಾಚರಣೆ ನಡೆಸದಿರುವ ಪೊಲೀಸರು ನಿರ್ಧರಿಸಿದ್ದಾರೆ.

No Comments

Leave A Comment