Log In
BREAKING NEWS >
ಕೊಪ್ಪಳದಲ್ಲಿ ಮುಂಜಾನೆ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ....

4 ವರ್ಷಗಳಲ್ಲಿ 9 ಟ್ರಸ್ಟ್‌ಗಳಿಂದ ಬಿಜೆಪಿಗೆ ರೂ.488.94 ಕೋಟಿ, ಕಾಂಗ್ರೆಸ್‍ಗೆ ರೂ.86.65 ಕೋಟಿ


ನವದೆಹಲಿ: 2013-14 ರಿಂದ 2016-17ರ ನಡುವೆ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಒಂಭತ್ತು ಟ್ರಸ್ಟ್ ಗಳು ಸರಿ ಸುಮಾರು 637.55 ಕೋಟಿ ರುಪಾಯಿ ದೇಣಿಗೆ ನೀಡಿದ್ದು ಇದರಲ್ಲಿ ಬಹುಪಾಲು ಬಿಜೆಪಿ ಪಕ್ಷ ಪಡೆದಿದೆ.

ಒಟ್ಟಾರೆ ಹಣದಲ್ಲಿ ಬಿಜೆಪಿ 488.94 ಕೋಟಿ ರುಪಾಯಿ ಪಡೆದರೇ, ಕಾಂಗ್ರೆಸ್ ಕೇವಲ 86.65 ಕೋಟಿ ಮಾತ್ರ ದೇಣಿಗೆ ಪಡೆದಿದೆ ಎಂಬ ವರದಿ ಬಹಿರಂಗಗೊಂಡಿದೆ.

ಒಂಭತ್ತು ಟ್ರಸ್ಟ್ ಗಳು ನೀಡಿರುವ ಹಣದಲ್ಲಿ ಐದು ರಾಷ್ಟ್ರೀಯ ಪಕ್ಷಗಳು ಶೇಕಡ 92.30(588.44 ಕೋಟಿ) ದೇಣಿಗೆ ಪಡೆದರೇ, 16 ಪ್ರಾದೇಶಕ ಪಕ್ಷಗಳು ಶೇಕಡ 7.70ರಷ್ಟು(49.09 ಕೋಟಿ) ದೇಣಿಗೆ ಪಡೆದಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ವರದಿಯಲ್ಲಿ ತಿಳಿಸಿದೆ.

ರಾಜಕೀಯ ಪಕ್ಷಗಳು 2013-14ರಲ್ಲಿ 85.37 ಕೋಟಿ, 2014-15ರಲ್ಲಿ 177.40 ಕೋಟಿ, 2015-16ರಲ್ಲಿ 49.50 ಕೋಟಿ, 2016-17ರಲ್ಲಿ 325.27 ಕೋಟಿ ರುಪಾಯಿ ದೇಣಿಗೆ ಪಡೆದಿವೆ ಎಂದು ಎಡಿಆರ್ ವರದಿಯಲ್ಲಿ ತಿಳಿಸಿದೆ.

No Comments

Leave A Comment