Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಬೆಲ್‌ ಬಾಟಮ್‌ಗೆ ಹರಿಪ್ರಿಯಾ ನಾಯಕಿ

ಜಯತೀರ್ಥ ನಿರ್ದೇಶನದಲ್ಲಿ “ಬೆಲ್‌ ಬಾಟಮ್‌’ ಎಂಬ ಸಿನಿಮಾ ಬರುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈ ಚಿತ್ರದಲ್ಲಿ ರಿಷಭ್‌ ಶೆಟ್ಟಿ ನಾಯಕರಾಗಿ ನಟಿಸುತ್ತಿದ್ದಾರೆ. ಆರಂಭದಲ್ಲಿ ಚಿತ್ರತಂಡ ವಿಭಿನ್ನವಾದ ಡಿಸೈನ್‌ವೊಂದನ್ನು ಕೊಟ್ಟು ಚಿತ್ರದ ಶೀರ್ಷಿಕೆ ಹುಡುಕುವ ಸವಾಲನ್ನು ಜನರಿಗೆ ಬಿಟ್ಟಿತ್ತು. ಈಗ ಮತ್ತೂಂದು ಸವಾಲು ಕೊಟ್ಟಿದೆ. ಅದು ನಾಯಕಿಯ ಯಾರೆಂದು ಕಂಡು ಹಿಡಿಯೋದು.

ಡಿಸೈನ್‌ವೊಂದರಲ್ಲಿ ಒಂದಷ್ಟು ಅಕ್ಷರಗಳನ್ನು ಹಾಕಲಾಗಿದ್ದು, ಅವೆಲ್ಲವನ್ನು ಕೂಡಿಸಿದರೆ “ಬೆಲ್‌ ಬಾಟಮ್‌’ ನಾಯಕಿಯ ಪೂರ್ಣ ಹೆಸರು ಸಿಗುತ್ತದೆ. ಹಾಗಂತ ಕೇವಲ ಬೆಲ್‌ ಬಾಟಮ್‌ ನಾಯಕಿಯ ಹೆಸರಿಗೆ ಸಂಬಂಧಿಸಿದ ಅಕ್ಷಗಳಷ್ಟೇ ಅಲ್ಲ, ಇತರ ನಾಯಕಿಯರ ಹೆಸರಿಗೆ ಸಂಬಂಧಿಸಿದ ಅಕ್ಷರಗಳೂ ಇವೆ. ಆದರೆ, ಅದು ಅಪೂರ್ಣವಾಗಿವೆ. ಎಲ್ಲಾ ಓಕೆ, ನಾಯಕಿ ಯಾರು ಎಂದು ನೀವು ಕೇಳಿದರೆ ಅದಕ್ಕೆ ಉತ್ತರ ಹರಿಪ್ರಿಯಾ.

ಹೌದು, “ಬೆಲ್‌ ಬಾಟಮ್‌’ ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿ ನಟಿಸಲಿದ್ದಾರೆ. ಈಗಾಗಲೇ ಚಿತ್ರತಂಡ ಮಾತುಕತೆ ನಡೆಸಿದ್ದು, ಹರಿಪ್ರಿಯ ಕೂಡಾ ಒಪ್ಪಿಕೊಂಡಿದ್ದಾರೆ. ಈ ಮೂಲಕ ಮತ್ತೂಮ್ಮೆ ಜಯತೀರ್ಥ ಹಾಗೂ ರಿಷಭ್‌ ಜೊತೆ ಕೆಲಸ ಮಾಡುವಂತಾಗಿದೆ. ಈ ಹಿಂದೆ ರಿಷಭ್‌ ನಿರ್ದೇಶನದ “ರಿಕ್ಕಿ’ ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿದ್ದರು. ಈಗ “ಬೆಲ್‌ ಬಾಟಮ್‌’ನಲ್ಲಿ ರಿಷಭ್‌ಗೆ ನಾಯಕಿಯಾಗಿದ್ದಾರೆ.

ಇನ್ನು, ಜಯತೀರ್ಥ ನಿರ್ದೇಶನದ “ಬುಲೆಟ್‌ ಬಸ್ಯಾ’ ಚಿತ್ರದಲ್ಲಿ ಹರಿಪ್ರಿಯ ನಟಿಸಿದ್ದು, ಈಗ ಮತ್ತೂಮ್ಮೆ ಅವರ ಸಿನಿಮಾದಲ್ಲಿ ನಾಯಕಿಯಾಗುತ್ತಿದ್ದಾರೆ. ಈ ಚಿತ್ರವನ್ನು ಗೋಲ್ಡನ್‌ ಹಾರ್ಸ್‌ ಸಿನಿಮಾಸ್‌ನಡಿ ಸಂತೋಷ್‌ ಕುಮಾರ್‌ ಎನ್ನುವವರು ನಿರ್ಮಿಸುತ್ತಿದ್ದಾರೆ. ಚಿತ್ರದ ಬರವಣಿಗೆಯಲ್ಲಿ ದಯಾನಂದ್‌ ಟಿ.ಕೆ. ಕೂಡಾ ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ, ಅರವಿಂದ್‌ ಕಶ್ಯಪ್‌ ಛಾಯಾಗ್ರಹಣವಿದೆ. ಫೆಬ್ರವರಿಯಿಂದ ಚಿತ್ರೀಕರಣ ಆರಂಭವಾಗಲಿದೆ.

No Comments

Leave A Comment