Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

2018 ಐಪಿಎಲ್: ಬೇರೆ ರಾಜ್ಯದ ಫ್ರಾಂಚೈಸಿ ಪಾಲಾದ ಕನ್ನಡಿಗ ಕ್ರಿಕೆಟಿಗರು ಇವರು!

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಕರ್ನಾಟಕದ ಆಟಗಾರರಾದ ಕೆಎಲ್ ರಾಹುಲ್, ಮನೀಷ್ ಪಾಂಡೆ ಮತ್ತು ಕರುಣ್ ನಾಯರ್ ದುಬಾರಿ ಮೊತ್ತಕ್ಕೆ ಸೇಲಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ ಕೆಎಲ್ ರಾಹುಲ್ ಅವರಿಗೆ 11 ಕೋಟಿ ಹಾಗೂ ಕರುಣ್ ನಾಯರ್ ಅವರಿಗೆ 5.6 ಕೋಟಿ ನೀಡಿ ಪಂಜಾಬ್ ಖರೀದಿಸಿದೆ. ಇನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಸ್ಫೋಟಕ ಬ್ಯಾಟ್ಸ್ ಮನ್ ಮನೀಶ್ ಪಾಂಡೆಗೆ 11 ಕೋಟಿ ರುಪಾಯಿಗೆ ಖರೀದಿಸಿದೆ.

ಮನೀಶ್ ಪಾಂಡೆ ಐಪಿಎಲ್ 10ನೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದರು. ಈ ಬಾರಿ ಮನೀಶ್ ರನ್ನು ಖರೀದಿಸಲು ಕೆಕೆಆರ್ ನಿರಾಸಕ್ತಿ ತೋರಿದೆ. ಇನ್ನು 50 ಲಕ್ಷ ಮುಖ ಬೆಲೆಯ ಕರುಣ್ ನಾಯರ್ ಅವರನ್ನು ಪಂಜಾಬ್ ಫ್ರಾಂಚೈಸಿ 5.6 ಕೋಟಿ ರುಪಾಯಿಗೆ ಖರೀದಿಸಿದೆ.

ಇನ್ನು ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಅವರು ಐಪಿಎಲ್ 10ನೇ ಆವೃತ್ತಿಯಲ್ಲಿ ಗಾಯಗೊಂಡಿದ್ದರಿಂದ ಪಂದ್ಯಾವಳಿಯಿಂದ ದೂರ ಉಳಿದಿದ್ದರು. ಈಗಿದ್ದರು ಇದೀಗ ಕೆಎಲ್ ರಾಹುಲ್ ಅವರಿಗೆ 11 ಕೋಟಿ ರುಪಾಯಿ ನೀಡಿ ದುಬಾರಿ ಮೊತ್ತಕ್ಕೆ ಪಂಜಾಬ್ ಖರೀದಿಸಿದೆ.

No Comments

Leave A Comment