Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಇಂದಿರಾ ಕ್ಯಾಂಟೀನ್‌ ಕಟ್ಟಡದಲ್ಲಿ ಮಹಿಳೆಯ ರೇಪ್‌&ಮರ್ಡರ್‌

ಬೆಳಗಾವಿ: ಜಿಲ್ಲೆಯ ಬಿಮ್ಸ್‌ ಆಸ್ಪತ್ರೆಯ  ಆವರಣ ದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್‌ ಕಟ್ಟಡದಲ್ಲಿ ಅನಾಥ ಮಹಿಳೆಯೊಬ್ಬರನ್ನು ಕಾಮಾಂಧರು ಬರ್ಬರವಾಗಿ ಅತ್ಯಾಚಾರ ಎಸಗಿ  ಅಮಾನುಷವಾಗಿ ಹತ್ಯೆಗೈದು ಪರಾರಿಯಾದ ಹೇಯ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಹತ್ಯೆಗೀಡಾದ ಮಹಿಳೆ ಬಿಮ್ಸ್‌ ಆವರಣದಲ್ಲಿ  ಕಳೆದ ಕೆಲ  ವರ್ಷದಿಂದ ನಿರ್ಗತಿಕಳಾಗಿ  ವಾಸಿಸುತ್ತಿದ್ದು, ಅವರಿವರು ಕೊಟ್ಟ ಆಹಾರ ತಿಂದು ದಿನ ದೂಡುತ್ತಿದ್ದರು ಎಂದು ತಿಳಿದು ಬಂದಿದೆ.

ರಾತ್ರಿ  ಊಟ ಮಾಡಿ  ಬಿಮ್ಸ್‌ ಆವರಣ ಇಂದಿರಾ ಕ್ಯಾಂಟೀನ್‌ ಆವರಣದ ಕಟ್ಟಡದಲ್ಲಿ ಮಲಗಿದ್ದ ವೇಳೆ ಕಾಮಾಂಧರು ಬಾಯಿಗೆ ಬಟ್ಟೆ ತುರುಕಿ ಹೇಯ ಕೃತ್ಯ ಎಸಗಿ  ಕೊಲೆಗೈದು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

ಎಪಿಎಂಸಿ  ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

No Comments

Leave A Comment