Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದ 118ನೇ ಭಜನಾ ಸಪ್ತಾಹದ ಆಮoತ್ರಣ ಪತ್ರಿಕೆ ಬಿಡುಗಡೆ-ಅಗಸ್ಟ್ 16ರಿ೦ದ ಭಜನಾ ಸಪ್ತಾಹ ಆರoಭ

ರಾಜ್ಯದ ಹಸಿವು ನೀಗಿಸುವಲ್ಲಿ ಇಂದಿರಾ ಕ್ಯಾಂಟಿನ್ ಪ್ರಮುಖ ಪಾತ್ರ: ವಾಜೂಭಾಯ್ ವಾಲಾ

ಬೆಂಗಳೂರು: 69ನೇ ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ವಾಜೂಭಾಯ್ ವಾಲಾ ಅವರು ಧ್ವಜಾರೋಹಣ ಮಾಡಿ, ಗೌರವ ವಂದನೆ ಸ್ವೀಕರಿಸಿದರು.

‘ಎಲ್ಲರಿಗೂ ನನ್ನ ನಮಸ್ಕಾರಗಳು’ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ವಾಜೂಭಾಯ್ ವಾಲಾ ಅವರು ಸ್ವಾತಂತ್ರ್ಯ ಸೇನಾನಿಗಳ ತ್ಯಾಗ ಬಲಿದಾನ ಅಮೂಲ್ಯವಾದದ್ದು ಎಂದರು. ಕರ್ನಾಟಕ ವೇಗವಾಗಿ ಅಭಿವೃದ್ಧಿ ಹೊಂದಿರುವ ರಾಜ್ಯವಾಗಿದೆ. ಇನ್ನು ಹೂಡಿಕೆದಾರರನ್ನು ಸೆಳೆಯುವಲ್ಲಿ ರಾಜ್ಯ ಯಶಸ್ವಿಯಾಗಿದೆ. ರಸ್ತೆಗಳ ಅಭಿವೃದ್ಧಿಗೆ ಕರ್ನಾಟಕ ಪ್ರಥಮ ಆದ್ಯತೆ ನೀಡಿದೆ ಎಂದರು.

ಇದೇ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆ ಅಪೂರ್ವಾಗಿದೆ. ಎಲ್ಲ ಜಿಲ್ಲೆಗಳಲ್ಲೂ ಉದ್ಯೋಗ, ಕೌಶಲ್ಯ ಅಭಿವೃದ್ಧಿಗೆ ಶ್ರಮಿಸಿದೆ, ರಾಜ್ಯದ ಎಲ್ಲಡೆ ವೈಫೈ ಸಂಪರ್ಕ ಸಾಧಿಸುವಲ್ಲಿ ಸಫಲವಾಗಿದೆ. ದಲಿತರು, ಅಲ್ಪಸಂಖ್ಯಾಂತರ ಕಲ್ಯಾಣಕ್ಕೆ ವಿಶೇಷ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ರಾಜ್ಯದ ಹಸಿವು ನೀಗಿಸುವಲ್ಲಿ ಇಂದಿರಾ ಕ್ಯಾಂಟಿನ್ ಪ್ರಮುಖ ಪಾತ್ರವಹಿಸಿದೆ. ಇದೇ ರೀತಿ ಎಲ್ಲಾ ಕಡೆ ಇಂದಿರಾ ಕ್ಯಾಂಟಿನ್ ಸ್ಥಾಪಿಸಲಾಗುವುದು ಎಂದರು. ಇನ್ನು ಎಲ್ಲಾ ಜಾತಿ ಧರ್ಮಗಳ ನಡುವೆ ಸಮಾನತೆ, ಸೌಹಾರ್ದತೆ ಮೂಡಬೇಕಾಗಿದೆ ಎಂದರು.

ಕೊನೆಯಲ್ಲಿ ಏಕ್ ಭಾರತ್, ಶ್ರೇಷ್ಠ ಭಾರತ್ ಎಂಬ ಸಂದೇಶ ನೀಡಿ, ಜೈ ಭಾರತ್, ಜೈ ಕರ್ನಾಟಕ ಎಂದು ಹೇಳಿ ವಾಜೂಭಾಯ್ ವಾಲಾ ಅವರು ತಮ್ಮ ಭಾಷಣವನ್ನು ಮುಗಿಸಿದರು.

No Comments

Leave A Comment