Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಭಾಸ್ಕರ ಶೆಟ್ಟಿ ಕೊಲೆ ಕೇಸ್‌: ಹೆಚ್ಚುವರಿ ಚಾರ್ಜ್‌ಶೀಟ್‌

ಉಡುಪಿ: ಉದ್ಯಮಿ ಇಂದ್ರಾಳಿಯ ಭಾಸ್ಕರ  ಶೆಟ್ಟಿ (52) ಅವರನ್ನು ಹೋಮಕುಂಡದಲ್ಲಿ ಹಾಕಿ ಸುಟ್ಟು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಸಿಐಡಿ ಪೊಲೀಸರು ಗುರುವಾರ 101 ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್‌ ಅನ್ನು ಉಡುಪಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಈ ಹಿಂದೆ 816 ಪುಟಗಳ ಚಾರ್ಜ್‌ ಶೀಟ್‌ ಅನ್ನು ಸಿಐಡಿ ಪೊಲೀಸರು ಸಲ್ಲಿಸಿದ್ದು, ಈಗ 817ರಿಂದ 918 ಪುಟ ಸಂಖ್ಯೆಯನ್ನು ಹೆಚ್ಚುವರಿ ಚಾರ್ಜ್‌ ಶೀಟ್‌ನಲ್ಲಿ ನಮೂದಿಸಲಾಗಿದೆ. ಅಂದು 147 ಸಾಕ್ಷಿಗಳನ್ನು   ಉಲ್ಲೇಖೀಸ ಲಾಗಿತ್ತು. ಈಗ  ಹೆಚ್ಚುವರಿ ಚಾರ್ಜ್‌ ಶೀಟ್‌ನಲ್ಲಿ ಮತ್ತೆ 20 ಸಾಕ್ಷಿಗಳನ್ನು ಉಲ್ಲೇಖೀಸಲಾಗಿದೆ. ತಜ್ಞರ ವರದಿಗಳ ಸಹಿತ ಹಲವು ದಾಖಲೆ, ಸಾಕ್ಷ್ಯಗಳು ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿವೆ.

ಸಿಐಡಿ ಡಿವೈಎಸ್‌ಪಿ ಚಂದ್ರಶೇಖರ್‌ ಅವರು ಹೆಚ್ಚುವರಿ ಚಾರ್ಜ್‌ಶೀಟ್‌ ಅನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ. ವೆಂಕಟೇಶ್‌ ನಾಯ್ಕ  ಮುಂದೆ ಸಲ್ಲಿಸಿದರು. ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಹಾಗೂ ಆರೋಪಿಗಳ ಪರ  ಅರುಣ್‌ ಬಂಗೇರ ಬೆಳುವಾಯಿ ಅವರು ಉಪಸ್ಥಿತರಿದ್ದರು.

ಫೆ. 9ರಂದು ಮುಂದಿನ ಪ್ರಕ್ರಿಯೆ
ಪ್ರಕರಣದ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ (51), ನವನೀತ ಶೆಟ್ಟಿ (21) ಮತ್ತು ನಂದಳಿಕೆ ನಿರಂಜನ ಭಟ್ಟ (27) ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಗುರುವಾರ ಅವರನ್ನು ಬೆಂಗಳೂರಿನಿಂದಲೇ ವೀಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟಿಗೆ ಹಾಜರುಪಡಿಸಲಾಯಿತು. ಜಾಮೀನಿನಲ್ಲಿರುವ ಸಾಕ್ಷ್ಯನಾಶದ ಆರೋಪಿಗಳಿಬ್ಬರು ಉಡುಪಿ ಕೋರ್ಟ್‌ನಲ್ಲಿ ಹಾಜರಿದ್ದರು. ಮುಂದಿನ ವಿಚಾರಣಾ ಪ್ರಕ್ರಿಯೆಗೆ ನ್ಯಾಯಾಧೀಶರು ಫೆ. 9ಕ್ಕೆ ದಿನಾಂಕ ನಿಗದಿಪಡಿಸಿದರು.

No Comments

Leave A Comment