Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಉಡುಪಿ ಶ್ರೀಕೃಷ್ಣಮಠದಲ್ಲಿ ಸ೦ಭ್ರಮದ ರಥಸಪ್ತಮಿ ಹಾಗೂ ಸಾಮೂಹಿಕ ಸೂರ್ಯನಮಸ್ಕಾರ

ಉಡುಪಿ:ರಥಸಪ್ತಮಿಯ ಅಂಗವಾಗಿ ಉಡುಪಿ ಶ್ರೀಕೃಷ್ಣಮಠದಲ್ಲಿ ಬುಧವಾರದ೦ದು (ಇಂದು) ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು,ಶ್ರೀ ಮಧ್ವಾಚಾರ್ಯರ 200ನೆ ಯ ಶತಮಾನೋತ್ಸವದ ಅಂಗವಾಗಿ ಇಂದಿನಿಂದ 108 ಪವಮಾನಹೋಮಗಳು, 41 ವಾಯುಸ್ತುತಿ ಪುರಶ್ಚರಣ ಹೋಮಗಳು, 10 ಮನ್ಯುಸೂಕ್ತ ಹೋಮಗಳು ಹಾಗೂ ಬಳಿತ್ಥಾ ಸೂಕ್ತ ಹೋಮಗಳು ಪ್ರಾರಂಭಗೊಂಡವು. ಶ್ರೀಪಲಿಮಾರುಮಠದ ಪ್ರಥಮ ಯತಿಗಳಾದ ಶ್ರೀಹೃಷೀಕೇಶತೀರ್ಥರ ಹಾಗೂ ನಾಲ್ಕನೆಯ ಯತಿಗಳಾದ ಶ್ರೀಅಪರಾಜಿತ ತೀರ್ಥರ ಆರಾಧನೆಯು ನಡೆದವು.

ಪರ್ಯಾಯ ಶ್ರೀಪಲಿಮಾರುಮಠ, ಶ್ರೀಪತಂಜಲಿ ಯೋಗಕೇಂದ್ರ ಕರ್ನಾಟಕ, ರಾಜಾಂಗಣಕಪ್ಪೆಟ್ಟು, ಪಂಡುಬೆಟ್ಟು – ಸ್ವಾಮಿವಿವೇಕಾನಂದ ಯೋಗ ವಿಜ್ಞಾನಕೇಂದ್ರ ಉಡುಪಿ, ಬನ್ನಂಜೆ, ಮಲ್ಪೆ – ಶ್ರೀಕೃಷ್ಣ ಯೋಗ ವಿಜ್ಞಾನ ಕೇಂದ್ರ, ಬ್ರಹ್ಮಗಿರಿ, ಉಡುಪಿ ಈ ಸಂಸ್ಥೆಗಳ ಸಹಯೋಗದಲ್ಲಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಆದಿತ್ಯ ಹೃದಯಮಂತ್ರದ ಹೋಮ ಮತ್ತು ಸಾರ್ವಜನಿಕರಿಂದ ಸಾಮೂಹಿಕ ಸೂರ್ಯನಮಸ್ಕಾರಗಳು ನಡೆದವು.

ಈ ಕಾರ್ಯಕ್ರಮದಲ್ಲಿ ಪರ್ಯಾಯ ಪಲಿಮಾರು ಮಠಾಧೀಶರಾದ ಪೂಜ್ಯ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹಾಗು ಅದಮಾರು ಮಠದ ಕಿರಿಯ ಶ್ರೀಪಾದರಾದ ಪೂಜ್ಯ ಶ್ರೀ ಈಶಪ್ರಿಯತೀರ್ಥರು ಉಪಸ್ಥಿತರಿದ್ದರು. ದಿವಾನರಾದ ವೇದವ್ಯಾಸ ತಂತ್ರಿ, ಅದಮಾರು ಮಠದ ವೆಂಕಟರಮಣ ಮುಚ್ಚಿಂತಾಯ, ಗಣ್ಯರಾದ ಬಾಲಾಜಿ ರಾಘವೇಂದ್ರ ಆಚಾರ್ಯ, ಡಾ.ವಂಶೀಕೃಷ್ಣ ಆಚಾರ್ಯ, ಮದರಾಸಿನ ರಾಮಪ್ರಸಾದ್ ಭಟ್, ಕಡೆಕಾರು ಶ್ರೀಶಭಟ್ ಭಾಗವಹಿಸಿದರು. ವಿದ್ವಾನ್ ಶ್ರೀರಮಣ ಆಚಾರ್ಯ ಹಾಗೂ ಟಿ.ಎಸ್. ಜನಾರ್ಧನ ಆಚಾರ್ಯ ಇವರು ಆದಿತ್ಯ ಹೃದಯ ಹೋಮವನ್ನು ನಡೆಸಿಕೊಟ್ಟರು.

No Comments

Leave A Comment