Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

3ನೇ ಟೆಸ್ಟ್ ಪಂದ್ಯ; ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಹಾಗೂ ಸರಣಿ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಜೊಹಾನ್ಸ್ ಬರ್ಗ್ ನ ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯ ಭಾರತದ ಮಟ್ಟಿಗೆ ಪ್ರಮುಖವಾಗಿದ್ದು, 3 ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಭಾರತ 2 ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ  ಸರಣಿ ಕೈ ಚೆಲ್ಲಿದ್ದು, ಈ ಪಂದ್ಯವನ್ನು ಶತಾಯಗತಾಯ ಗೆಲ್ಲುವ ಮೂಲಕ ಮಾನ ಉಳಿಸಿಕೊಳ್ಳಲು ಹವಣಿಸುತ್ತಿದೆ.

ಆದರೆ ದಕ್ಷಿಣ ಆಫ್ರಿಕಾ ಪರಿಸ್ಥಿತಿ ಭಿನ್ನವಾಗಿದ್ದು, ಈಗಾಗಲೇ ಸರಣಿ ಜಯಿಸಿರುವುದರಿಂದ ಈ ಪಂದ್ಯ ಆಪ್ರಿಕಾಗೆ ಬೆಂಚ್ ಸ್ಟ್ರೆಂತ್ ಪರೀಕ್ಷೆಯ ಪಂದ್ಯವಾಗಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ಕೇಶವ್ ಬದಲಿಗೆ ಅ್ಯಂಡಿಲೇ ಅವರನ್ನು  ಕಣಕ್ಕಿಳಿಸಿದೆ. ಇನ್ನು ಭಾರತ ತಂಡ ರೋಹಿತ್ ಶರ್ಮಾ ಬದಲಿಗೆ ರಹಾನೆ ಸ್ಥಾನ ಗಿಟ್ಟಿಸಿದ್ದು, ಅಶ್ವಿನ್ ಬದಲಿಗೆ ಭುವನೇಶ್ವರ್ ಕಣಕ್ಕಿಳಿದಿದ್ದಾರೆ.

No Comments

Leave A Comment