Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಮ್ಯಾಟ್ರಿಮೋನಿಯಾ: ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂ ವಂಚನೆ

ಬೆಂಗಳೂರು: ಮ್ಯಾಟ್ರಿಮೋನಿಯಾ ವೆಬ್‌ಸೈಟ್‌ವೊಂದರಲ್ಲಿ ಪರಿಚಯವಾಗಿದ್ದ ಮಹಿಳೆಯೊಬ್ಬರು ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ವರದಿಯಾಗಿದೆ.

ಧನಂಜಯ್‌ ಎಂಬುವವರು ವಂಚನೆಗೆ ಒಳಗಾದ ವ್ಯಕ್ತಿ. ಆವರು ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ರಿಜಿಸ್ಟ್ರರ್‌ ಮಾಡಿಕೊಂಡಿದ್ದರು. ಆದರಲ್ಲಿ ಶಿಲ್ಪಾ ಎಂಬ ಯುವತಿಯ ಪರಿಚಯವಾಗಿದೆ. ಪರಿಚಯ ಪ್ರೇಮಾಂಕುರಕ್ಕೆ ತಿರುಗಿ ಮದುವೆಯಾಗಲು ನಿರ್ಧರಿಸಿದ್ದರು.

ಈ ಸಂದರ್ಭದಲ್ಲಿ ತನ್ನ ಸಹೋದರನ ಚಿಕಿತ್ಸೆಗೆ ಹಣದ ಅವಶ್ಯಕತೆ ಇದೆ ಸ್ವಲ್ಪ ಹಣ ನೀಡಿ ಎಂದು ಧನಂಜಯ್‌ ಅವರಲ್ಲಿ ಶಿಲ್ಪಾ ಆಳಲನ್ನು ತೋಡಿಕೊಂಡಿದ್ದಾರೆ. ಇದನ್ನು ನಂಬಿದ ಧನಂಜಯ್‌ 3 ಲಕ್ಷ 45 ಸಾವಿರ ರೂಪಾಯಿ ಹಣವನ್ನು ಶಿಲ್ಪಾ ಅವರ ಖಾತೆಗೆ ವರ್ಗಾಹಿಸಿದ್ದಾರೆ.

ಇದಾದ ಕೆಲವು ದಿನಗಳ ನಂತರ ಶಿಲ್ಪಾ ಮೊಬೈಲ್‌ನ್ನು ಸ್ವಿಚ್ಡ್  ಆಫ್ ಮಾಡಿಕೊಂಡಿದ್ದಾರೆ. ಧನಂಜಯ್‌ ಅವರ ಸಂಪರ್ಕಕ್ಕೆ ಸಿಗುತ್ತಿಲ್ಲ. ತಾನು ಮೋಸ ಹೋಗಿರುವುದು ಖಾತರಿಯಾಗಿದ್ದು ನ್ಯಾಯ ಕೊಡಿಸುವಂತೆ ಧನಂಜಯ್‌ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಗಿರಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಾದ್ದಾರೆ.

No Comments

Leave A Comment