ಮಂಗಳೂರು: ಮನೆಯೊಳಗೆ ನುಗ್ಗಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸೋಮವಾರ ನಸುಕಿನ ಜಾವ ಪಣಂಬೂರು ಬಳಿಯಲ್ಲಿ ನಡೆದಿದೆ.
ಶಿವರಾಜ್(39) ಹತ್ಯೆಯಾದ ವ್ಯಕ್ತಿ. ಮೆಂಡನ್ ಗ್ಯಾಂಗ್ನ ಭರತೇಶ್ನ ಅಣ್ಣ ಎಂದು ತಿಳಿದು ಬಂದಿದೆ. ಭರತೇಶನ್ನ ಮೇಲಿನ ದ್ವೇಷಕ್ಕೆ ಶಿರರಾಜ್ನನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.