Log In
BREAKING NEWS >
ಕೊಪ್ಪಳದಲ್ಲಿ ಮುಂಜಾನೆ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ....

ಕಾರಟಗಿ:ಭಾರೀ ಅಗ್ನಿ ಅವಘಡ;16 ಅಂಗಡಿಗಳು ಭಸ್ಮ

ಕಾರಟಗಿ : ಇಲ್ಲಿ ಭಾನುವಾರ ಬೆಳಗ್ಗೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು 16ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮವಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಅದೃಷ್ಟವಷಾತ್‌ ಯಾವುದೇ ಪ್ರಾಣ ಹಾನಿ ಸಂಭಿವಿಸಿಲ್ಲ.

ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ  ಹೊಟೇಲೊಂದರಲ್ಲಿ ಹೊತ್ತಿಕೊಂಡ ಬೆಂಕಿ ಪಕ್ಕದಲ್ಲಿದ್ದ ಅಂಗಡಿಗಳಿಗೆ ವ್ಯಾಪಿಸಿದೆ.ಗ್ಯಾಸ್‌ ಸಿಲಿಂಡರ್‌ವೊಂದಕ್ಕೆ ಬೆಂಕಿ ತಗುಲಿದೆ ಎಂದು ಹೇಳಲಾಗಿದೆ.

ಸೈಕಲ್‌ ರಿಪೇರಿ ಅಂಗಡಿ,ಕಟ್ಟಿಂಗ್‌ ಶಾಪ್‌,ಫಾಸ್ಟ್‌ ಫ‌ುಡ್‌ ಅಂಗಡಿ ಸೇರಿದಂತೆ 16 ಗೂಡಂಗಡಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

  ಗ್ಯಾರೇಜ್‌ ನಲ್ಲಿ ರಿಪೇರಿಗೆಂದು ಇರಿಸಲಾಗಿದ್ದ 12 ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಭಸ್ಮವಾಗಿದೆ.

ಅಗ್ನಿ ಶಾಮಕ ದಳದ ಸಿಬಂದಿಗಳು ಸ್ಥಳಕ್ಕಾಗಮಿಸಿ ಹರಸಾಹಸ ಪಟ್ಟು ಬೆಂಕಿಯನ್ನು ತಹಬದಿಗೆ ತಂದಿದ್ದಾರೆ.

No Comments

Leave A Comment