Log In
BREAKING NEWS >
ಜಮ್ಮು: ವೇಗವಾಗಿ ಸಾಗುತ್ತಿದ್ದ ಎಸ್‌ಯುವಿ ವಾಹನವೊಂದು ಆಯ ತಪ್ಪಿ ಕಮರಿಗೆ ಬಿದ್ದ ಪರಿಣಾಮ ಅದರಲ್ಲಿದ್ದ ನಾಲ್ವರು ಮಹಿಳೆಯರು, ಐವರು ಮಕ್ಕಳು ಸೇರಿ 11 ಮಂದಿ ಸಾವಿಗೀಡಾಗಿದ್ದಾರೆ.... 48 ಗಂಟೆಗೆ ಮುನ್ನ ಪ್ರಣಾಳಿಕೆ ಬೇಡ: ಆಯೋಗ...

ಸ್ಯಾಂಡಲ್ ವುಡ್ ನಿರ್ದೇಶಕ, ನಿರ್ಮಾಪಕರ ಕಾಮಪುರಾಣ ಬಯಲು ಮಾಡಿದ ನಟಿ ಶೃತಿ ಹರಿಹರನ್

ಹೈದರಾಬಾದ್: ಖ್ಯಾತ ನಟಿ ಶೃತಿ ಹರಿಹರನ್ ಕನ್ನಡ ಚಿತ್ರರಂಗದ ಕಾಮಪುರಾಣವನ್ನು ಬಯಾಬಯಲು ಮಾಡಿದ್ದು, ಈ ಹಿಂದೆ ತಮ್ಮನ್ನು ಐದು ಮಂದಿ ನಿರ್ಮಾಪಕರು ಮಂಚಕ್ಕೆ ಕರೆದಿದ್ದರು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್ ನಲ್ಲಿ ನಡೆದ ಇಂಡಿಯಾ ಟುಡೇ ವಾಹಿನಿಯ ಕಾನ್ ಕ್ಲೇವ್ ಸೌಥ್-2018 ಕಾರ್ಯಕ್ರಮದಲ್ಲಿ ಮಾತನಾಡಿದ ಶೃತಿ ಹರಿಹರನ್, ಖ್ಯಾತ ತಮಿಳು ನಿರ್ಮಾಪಕರೊಬ್ಬರು ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂಬ ಸ್ಫೋಟಕ  ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೆ ತಮ್ಮ 18ನೇ ವಯಸ್ಸಿನಲ್ಲೇ ನಟಿ ಶೃತಿಹರಿಹರನ್ ಲೈಂಗಿಕ ಕಿರುಕುಳ ಎದುರಿಸಿದ್ದ ಕುರಿತು ಮಾಹಿತಿ ಬಹಿರಂಗ ಪಡಿಸಿದ್ದಾರೆ.

“ಆಗಿನ್ನು ನಾನು ನೃತ್ಯಗಾರ್ತಿಯಾಗಿದ್ದೆ. ನನ್ನ ಮೊದಲು ಕನ್ನಡ ಚಿತ್ರದ ಪಾತ್ರಕ್ಕಾಗಿ ಪ್ರಯತ್ನಿಸುವಾಗ ನಿರ್ಮಾಪಕರೊಬ್ಬರು ಮಂಚಕ್ಕೆ ಕರೆದಿದ್ದರು. ಆಗ ತುಂಬಾ ಗಾಬರಿಯಾಗಿ ಕಣ್ಣೀರು ಹಾಕಿದ್ದೆ. ಏನು ಮಾಡಬೇಕು ಎಂದು  ತೋಚದೆ ನನ್ನ ನೃತ್ಯ ನಿರ್ದೇಶಕರ ಹತ್ತಿರ ಈ ವಿಷಯ ಹಂಚಿಕೊಂಡೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಅವರು ಈ ವಿಷಯಗಳನ್ನು ಯಾವ ರೀತಿ ನಿಭಾಯಿಸ ಬೇಕು ಎಂಬುದನ್ನು ನೀನು ಕಲಿಯಬೇಕು. ಇಲ್ಲದಿದ್ದರೆ ಚಿತ್ರೋದ್ಯಮ ಬಿಟ್ಟು ಬಿಡು  ಎಂದು ಹೇಳಿದ್ದರು. ಈ ವೇಳೆ ನಾನು ಅಳುತ್ತಾ ಮನೆಗೆ ಬಂದಿದ್ದೆ.

ಬಳಿಕ ನನ್ನದೇ ಕನ್ನಡ ಚಲನಚಿತ್ರವೊಂದನ್ನು ತಮಿಳಿನಲ್ಲಿ ರಿಮೇಕ್​ ಮಾಡಲಿದ್ದ ಖ್ಯಾತ ನಿರ್ಮಾಪಕನೊಬ್ಬ ತಮಗೆ ಕರೆ ಮಾಡಿ, ಅದೇ ಪಾತ್ರ ನಮ್ಮ ಚಿತ್ರದಲ್ಲಿಯೂ ನಿವೇ ಮಾಡಿ ಎಂದಿದ್ದರು. ಆದರೆ, ನಾವು 5 ಜನರಿದ್ದೇವೆ  ಅಡ್ಜಸ್ಟ್​ ಮಾಡಿಕೋ ಎಂದ್ದಿದ್ದರು. ಕೂಡಲೇ ನಾನು ತಪ್ಪಲಿ ತಗೋತೀನಿ ಎಂದಿದೆ.. ಈ ಘಟನೆಯಿಂದ ನಾನು ಗಾಬರಿಯಾಗಿದ್ದೆ. ಚಿತ್ರರಂಗದಲ್ಲಿ ಹೆಣ್ಣು ಮಾರಾಟದ ವಸ್ತುವಾಗಿದ್ದಾಳೆ. ಓರ್ವ ನಿರ್ದೇಶಕನಂತೂ ವಿಚಿತ್ರವಾಗಿ  ಮಾತನಾಡಿದ್ದ. ಹಿರೋಯಿನ್ ರನ್ನು ನೋಡಿದರೆ ವಾವ್ಹ್…ಅನ್ನಿಸಬೇಕು… ಎಂದು ಹೇಳಿದ್ದರು ಎಂದು ಶೃತಿ ಹೇಳಿಕೊಂಡಿದ್ದಾರೆ.

ಒಟ್ಟಾರೆ ಚಿತ್ರರಂಗದ ಕೆಲ ನಿರ್ಮಾಪಕ, ನಿರ್ದೇಶಕರ ಕಾಮಪುರಾಣ ಇಡೀ ಚಿತ್ರರಂಗಕ್ಕೆ ಕಪ್ಪು ಮಸಿ ಬಳಿಯುತ್ತಿದ್ದು, ಈ ಹಿಂದೆ ಕನ್ನಡದ ಖಾಸಗಿ ವಾಹಿನಿಯೊಂದು ಕುಟುಕು ಕಾರ್ಯಾಚರಣೆ ನಡೆಸಿ ಖ್ಯಾತ ನಿರ್ದೇಶಕರ  ಕಾಮಪುರಾಣವನ್ನು ಬಯಲಿಗೆಳೆದಿತ್ತು.

No Comments

Leave A Comment